ಕುಮಟಾ: ತಾಲೂಕಿನ ಹನೇಹಳ್ಳಿ ಮತ್ತು ಕೋಡ್ಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಪ್ರಚಾರ ಸಭೆಗಳನ್ನು ನಡೆಸಿದರು.
ತಾಲೂಕಿನ ಹನೇಹಳ್ಳಿ ಗ್ರಾಪಂ ವ್ಯಾಪ್ತಿಯ ಕಡವೆ ಗ್ರಾಮದದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲಿನ ಗ್ರಾಮಸ್ಥರು ಹೇಳಿಕೊಂಡ ಸಮಸ್ಯೆಗೆ ಸ್ಪಂದಿಸಿದ ನಿವೇದಿತ್ ಅವರು ರಾಜ್ಯದಲ್ಲಿ ಯಾವುದೇ ಸಮಿಶ್ರ ಸರ್ಕಾರ ಬರಲ್ಲ. ಕಾಂಗ್ರೆಸ್ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುತ್ತದೆ. ಸಿದ್ಧರಾಮಯ್ಯ ಅವರು ಸಿಎಂ ಆದಾಗ ಐದು ವರ್ಷಗಳು ಉತ್ತಮ ಜನಪರ ಆಡಳಿತ ಕೊಟ್ಟಿದ್ದರು. ನಾವು ನೀಡಿದ ಎಲ್ಲ ಭರವಸೆಯನ್ನು ಈಡೇರಿಸಿದ್ದೇವು. ಈ ಬಾರಿಯೂ ಕಾಂಗ್ರೆಸ್ ವತಿಯಿಂದ ನೀಡಲಾದ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು. ಇಲ್ಲಿನ ಜನರು ಉದ್ಯೋಗಕ್ಕಾಗಿ ಬೇರೆ ಊರಿಗೆ ವಲಸೆ ಹೋಗಬೇಕಾದ ದುಸ್ಥಿತಿ ಇರುವುದು ನಾನು ಅರಿತುಕೊಂಡಿದ್ದೇನೆ. ನಾನು ಶಾಸಕನಾದರೆ, ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಿಕೊಡಲು ಹೊಸ ಯೋಜನೆ ರೂಪಿಸಿಕೊಡುತ್ತೇನೆ. ಈ ಕ್ಷೇತ್ರದ ಸರ್ವಾಂಗೀರ್ಣ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ ಎಂದರು.
ಕೋಡ್ಕಣಿಯ ಶಶಿಹಿತ್ತಲಿನ ಗ್ರಾಮದ ನಾರಾಯಣ ನಾಯ್ಕರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಅವರು ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಬಿಜೆಪಿ ಸರ್ಕಾರ ಬಂದ ಮೇಲೆ ಬೆಲೆ ಏರಿಕೆ ಉಂಟಾಗಿ ಜನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. 450 ರೂ. ಗ್ಯಾಸ್ ಬೆಲೆ 1100ಕ್ಕೆ ಏರಿಕೆಯಾಗಿದೆ. ಮೀನುಗಾರರಿಗೆ ಮೀನುಗಾರಿಕೆ ಮಾಡಲು ಸೀಮೆಎಣ್ಣೆ ಇಲ್ಲ. ಪೆಟ್ರೋಲ್, ಡಿಸೇಲ್ ದರ ಗಗನಕ್ಕೇರಿದೆ. ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗಿದೆ. ಆದರೆ ಜನಸಾಮಾನ್ಯರ ದುಡಿಮೆಯಲ್ಲಿ ಏರಿಕೆಯಾಗಿಲ್ಲ. ನಿಮ್ಮ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಮತ ಕೇಳಲು ಬಂದರೆ, ಅವರ ಬಳಿ ಕೇಳಿ, ಐದು ವರ್ಷದಲ್ಲಿ ನೀವು ಏನು ಮಾಡಿದ್ದಿರಿ. ಜನಸಾಮಾನ್ಯರು ಕಷ್ಟಪಡಲು ಕಾರಣವಾದ ಬೆಲೆ ಏರಿಕೆಯನ್ನು ಯಾಕೆ ನಿಯಂತ್ರಿಸಿಲ್ಲ ಎಂದು ಪ್ರಶ್ನಿಸಿ. ನಾನು ಈ ಕ್ಷೇತ್ರದ ಶಾಸಕನಾದರೆ ನಿಮ್ಮೆಲ್ಲ ಕಷ್ಟವನ್ನು ನಿವಾರಿಸುವ ಕಾರ್ಯ ಮಾಡುತ್ತೇನೆ. ಹಾಗಾಗಿ ಈ ಬಾರಿ ಕಾಂಗ್ರೆಸ್‌ನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಬಳಿಕ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ತಾಲೂಕು ಮಹಿಳಾಧ್ಯಕ್ಷೆ ಸುರೇಖಾ ವಾರೇಕರ್ ಸೇರಿದಂತೆ ಇನ್ನಿತರೆ ಮುಖಂಡರು ಮಾತನಾಡುವ ಮೂಲಕ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನ ಜಾಗೃತಿ ಮೂಡಿಸುವ ಜೊತೆಗೆ ಬಡವರ ಕಲ್ಯಾಣ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರದೀಪ ನಾಯಕ, ಮೀರಾ ಆಳ್ವಾ, ಅರುಣ ಗೌಡ, ಆನಂದ ಗೌಡ, ಜಯಂತ ನಾಯ್ಕ, ದೇವಕಿ ಗೌಡ, ತಿಮ್ಮ ಗೌಡ, ಇತರರು ಉಪಸ್ಥಿತರಿದ್ದರು.