• Slide
    Slide
    Slide
    previous arrow
    next arrow
  • ಮೋಸ, ವಂಚನೆಗಳು ಈ ಚುನಾವಣೆಯಲ್ಲಿ ನಡೆಯಲ್ಲ: ಭೀಮಣ್ಣ ನಾಯ್ಕ

    300x250 AD

    ಸಿದ್ದಾಪುರ: ಕಾಂಗ್ರೆಸ್ ಸರ್ಕಾರವಿದ್ದಾಗ ತಂದoತ ಯೋಜನೆಗಳನ್ನೇ ತಮ್ಮ ಸರ್ಕಾರ ಮಾಡಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂಥ ಮೋಸ, ವಂಚನೆಗಳು ಈ ಬಾರಿ ನಡೆಯುವುದಿಲ್ಲ. ಹೆಚ್ಚಿನ ಜನರು ಕಾಂಗ್ರೆಸ್‌ನತ್ತ ಒಲವು ತೋರಿಸಿದ್ದು, ಈ ಬಾರಿ ಬಾರಿ ಬಹುಮತದಿಂದ ನನ್ನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಟಿ.ನಾಯ್ಕ ಹೇಳಿದರು.

    ಅವರು ತಮ್ಮ ಪಟ್ಟಣದ ಬಾಲಿಕೊಪ್ಪದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು. ಪಟ್ಟಣ ಪಂಚ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಇದ್ದು, ನಾವು ಹೋದಲ್ಲೆಲ್ಲ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳುತ್ತಿದ್ದಾರೆ. 15 ವಷಗಳಿಂದ ಶಾಸಕರಾಗಿದ್ದ ಕಾಗೇರಿಯವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನೀಡಿದ ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವಲ್ಲಿ ಕಾರ್ಯಕರ್ತರು ಪ್ರವೃತ್ತರಾಗಬೇಕು. ಜೊತೆಗೆ ಆಡಳಿತದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಯಾವ ರೀತಿಯ ಯೋಜನೆಗಳನ್ನ ನೀಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಜನಸಾಮಾನ್ಯರಿಗೆ ತಿಳುವಳಿಕೆ ನೀಡಿ ಮನವೊಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ. ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಡಳಿತ ವೈಫಲ್ಯ, ಅವರು ಜನರಿಗೆ ಸ್ಪಂದಿಸದಿರುವ ವಿಷಯಗಳನ್ನು ಜನಸಾಮಾನ್ಯರಿಗೆ ತಿಳಿಸಿ ಮತ ಚಲಾಯಿಸುವಂತೆ ಭೀಮಣ್ಣ ನಾಯ್ಕ ಸೂಚಿಸುತ್ತಿದ್ದಾರೆ.

    300x250 AD

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ, ಬಿಜೆಪಿಯವರು ಹಿಂದುತ್ವದ ಆಧಾರದಲ್ಲಿ ಮತ ಪಡೆಯಲು ಹಿಂದೂ ಯುವಕರನ್ನ ಬಳಸಿಕೊಂಡು ಧರ್ಮದ ಹೆಸರಿನಲ್ಲಿ ಯುವಕರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಸಿದ್ದಾಪುರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರ ಉಪಯೋಗವನ್ನು ನಾವು ಪಡೆದುಕೊಂಡು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ನೋಡಲು ಕಾತರರಾಗಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮುಖಂಡರುಗಳಾದ ವಿ.ಎನ್.ನಾಯ್ಕ ಬೇಡ್ಕಣಿ, ಸಿ.ಆರ್.ನಾಯ್ಕ, ವೀರಭದ್ರ ನಾಯ್ಕ, ಸುರೇಂದ್ರ ಮಡಿವಾಳ, ಜೈರಾಮ್ ನಾಯ್ಕ ಹೊಸೂರ್, ವೆಂಕಟರಮಣ ನಾಯ್ಕ, ಮುನಾವರ್ ಗುರ್ಕಾರ್, ಬಾಲಕೃಷ್ಣ ನಾಯ್ಕ, ಪ್ರಶಾಂತ್ ನಾಯ್ಕ ಹೊಸೂರ್, ಹೆಚ್.ಕೆ.ಶಿವಾನಂದ ಸೆರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top