Slide
Slide
Slide
previous arrow
next arrow

ಸಿದ್ದರಾಮಯ್ಯ ಕ್ಷಮೆ ಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

300x250 AD

ಬೆಂಗಳೂರು: ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಾಚಾರಿಗಳು ಎಂದ ಸಿದ್ಧರಾಮಯ್ಯ ಅವರ ಹೇಳಿಕೆ ಖಂಡನೀಯ. ಇದು ಕರ್ನಾಟಕಕ್ಕೆ ಮಾಡಿದ ಅವಮಾನ. ಸಿದ್ಧರಾಮಯ್ಯ ಅವರು ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರು ಆಗ್ರಹಿಸಿದರು.

ಹುಬ್ಬಳ್ಳಿಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವಧರ್ಮ ಸಮಭಾವ ಎಂಬ ಕಲ್ಪನೆಯನ್ನು ನೀಡಿದವರು ಬಸವಣ್ಣನವರು. ಆದರೆ ಕಾಂಗ್ರೆಸ್ ಪಕ್ಷವು ಬಸವಣ್ಣವರ ಜಯಂತಿಯ ಹಿಂದಿನ ದಿನವೇ, ಇಂಥ ಟೀಕೆ ಮಾಡಿದೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ನೋ ಗ್ಯಾರಂಟಿ. ಅಂತಹದರಲ್ಲಿ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದೆ ಎಂದು ವ್ಯಂಗ್ಯಮಾಡಿದರು. ಅವರಿಗೆ ತಾಕತ್ತಿದ್ದರೆ ಲಿಂಗಾಯತ ಸಮುದಾಯದವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಿ ಎಂದು ಸವಾಲೆಸೆದರು.

ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ 2000 ರೂಗಳು, 200 ಯುನಿಟ್ ಉಚಿತ ವಿದ್ಯುತ್, 10 ಕೆ.ಜಿ. ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ ಆಶ್ವಾಸನೆ ನೀಡುತ್ತಿದ್ದಾರೆ. ಇವೆಲ್ಲ ಬರೀ ಬೋಗಸ್, ಇದಕ್ಕೆಲ್ಲ 68000 ಕೋಟಿ ರೂ ವೆಚ್ಚ ತಗಲುತ್ತದೆ. ಇದು ನಮ್ಮ ಕರ್ನಾಟಕದ ಬಜೆಟ್ ಗಿಂತಲೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.

2004 ರಲ್ಲಿ ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು, ಸರ್ಕಾರ ಬಂದ ನಂತರ ಸಿದ್ದರಾಮಯ್ಯನವರೇ ಇದನ್ನು ನಿರಾಕರಿಸಿದರು. ರಾಜಸ್ಥಾನದ ಸಿಎಂ, ಸರ್ಕಾರ ಬಂದ ಹತ್ತು ದಿನದಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಅದು ಈಡೇರಲಿಲ್ಲ. ಛತ್ತೀಸಗಡ್, ಹಿಮಾಚಪ್ರದೇಶದಲ್ಲೂ ಕೂಡ ಬರೀ ಸುಳ್ಳು ಆಶ್ವಾಸನೆ ನೀಡಿತು. ಕಾಂಗ್ರೆಸ್ ನವರು ಎಸ್‍ಡಿಪಿಐ, ಪಿಎಫ್‍ಐ ಹಾಗೂ ತುಕ್ಡೆ ಗ್ಯಾಂಗ್‍ನ ಜೊತೆಗಿದ್ದಾರೆ. ಇದನ್ನು ಸ್ವತಃ ಪಿಎಫ್‍ಐ ನವರೇ ಹೇಳಿಕೊಂಡಿದ್ದಾರೆ ಎಂದರು.

300x250 AD

ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಈಗಾಗಲೇ ಪ್ರವಾಸದಲ್ಲಿ ಇದ್ದಾರೆ, ತದನಂತರ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಸ್ಮೃತಿ ಇರಾನಿ- ಹೀಗೆ ಅನೇಕ ಕೇಂದ್ರ ಮಂತ್ರಿಗಳು ಬರುವರು ಎಂದು ತಿಳಿಸಿದರು.

ನಮ್ಮ ಬಿಜೆಪಿ ಪಕ್ಷವೇ ಮತ್ತೊಮ್ಮೆ ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುವುದಾಗಿ ಭರವಸೆಯಿಂದ ನುಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಲಿಂಗರಾಜ್ ಪಾಟೀಲ, ಅಶೋಕ ಕಾಟವೆ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಗುರು ಪಾಟೀಲರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top