Slide
Slide
Slide
previous arrow
next arrow

ಏ.29ಕ್ಕೆ ಸಾಯಿ ಸಂಗೀತ ವಿದ್ಯಾಲಯ ವಾರ್ಷಿಕ ಸಂಗೀತ ಸಮ್ಮೇಳನ

300x250 AD

ಶಿರಸಿ: ಇಲ್ಲಿನ ಶ್ರೀ ಸಾಯಿ ಸಂಗೀತ ವಿದ್ಯಾಲಯದ `40ನೇ ವಾರ್ಷಿಕ ಸಂಗೀತ ಸಮ್ಮೇಳನ, ಪ್ರಶಸ್ತಿ ಪ್ರದಾನ’ ಕಾರ್ಯಕ್ರಮವನ್ನು ಏ.29 ಶನಿವಾರ ನಗರದ ರಾಯರಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಸಂಜೆ 6.30 ರಿಂದ ಖ್ಯಾತ ಹಿಂದೂಸ್ತಾನಿ ಗಾಯಕರಾದ ವಿ. ಕುಮಾರ ಮರಡೂರ ಅವರಿಗೆ “ಪಂ. ರಂಗನಾಥ ಹೆಗಡೆ ಶೀಗೆಹಳ್ಳಿ ಪ್ರಶಸ್ತಿ” ಪ್ರದಾನ ಮಾಡಲಾಗುವುದು . ಹಾಗೂ ಇದೇ ಸಂದರ್ಭದಲ್ಲಿ ಜಿಲ್ಲೆಯ ಆಯ್ದ ಸಂಗೀತ ಪ್ರತಿಭೆಗಳಿಗೆ ಪುರಸ್ಕಾರ ನೀಡಲಾಗುವುದು. ಈವರೆಗೆ 77 ಪ್ರತಿಭೆಗಳಿಗೆ ಪುರಸ್ಕಾರ ಹಾಗೂ ರೂ 46,000 ರೂ.ನಗದು ನೀಡಲಾಗಿದೆ.

ಈ ವರ್ಷ ಪುರಸ್ಕಾರಕ್ಕೆ ಅರ್ಪಿತಾ ಹೆಗಡೆ (ಗಾಯನ), ವರ್ಷಾ ಹೆಗಡೆ(ಗಾಯನ) ಹಾಗೂ ಕೃತ್ತಿಕಾ ಭಟ್(ಗಾಯನ) ಆಯ್ಕೆಯಾಗಿದ್ದಾರೆ.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ವಿಷ್ಣುದಾಸ ಕಾಸರಗೋಡ ವಹಿಸಲಿದ್ದು , ಖ್ಯಾತ ಉದ್ಯಮಿ ಹಾಗೂ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದ ಧುರೀಣರಾದ ಲೋಕೇಶ ಹೆಗಡೆ, ಶಿರಸಿ ಇವರು ಮುಖ್ಯ ಅತಿಥಿಗಳಾಗಿ‌ ಆಗಮಿಸಲಿದ್ದಾರೆ. ಶ್ರೀಮತಿ ಯಮುನಾ ರಂಗನಾಥ ಹೆಗಡೆ ಶೀಗೇಹಳ್ಳಿ  ಗೌರವ ಉಪಸ್ಥಿತಿ ನೀಡಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಅತಿಥಿ ಕಲಾವಿದರಾದ ವಿ. ಕುಮಾರ ಮರಡೂರ ಗಾಯನವಿದ್ದು , ಇವರಿಗೆ ತಬಲಾದಲ್ಲಿ ಕಾರ್ತಿಕ್ ಭಟ್, ಬೆಂಗಳೂರು ಹಾಗೂ ಗುರುಪ್ರಸಾದ್ ಹೆಗಡೆ, ಗಿಳಿಗುಂಡಿ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ.

300x250 AD

ವಿ. ಕುಮಾರ ಮರುಡೂರ ಕಿರು ಪರಿಚಯ: ವಿ. ಕುಮಾರ ಮರುಡೂರ  ಅವರ ತಂದೆಯವರಾದ ಪಂ . ಸೋಮನಾಥ ಮರಡೂರ ಅವರಲ್ಲಿ ಕಿರಾನಾ, ಗ್ವಾಲಿಯರ್ ಹಾಗೂ ಜೈಪುರ ಘರಾಣೆಗಳ ಗಾಯಕಿಗಳನ್ನು ಅಭ್ಯಸಿಸಿ ಅವರದೇ ಆದ ಶೈಲಿಯಲ್ಲಿ ಅನ್ವಯಗೊಳಿಸಿದ್ದಾರೆ. ಅವರು ಕಲ್ಕತ್ತೆಯ ಐಟಿಸಿಯವರ ಎಸ್‌ಆರ್‌ಎದಲ್ಲಿ ಶಿಕ್ಷಕರಾಗಿದ್ದು, ಜೊತೆಗೇ ಅವರು ಆಕಾಶವಾಣಿ ಹಾಗೂ ದೂರದರ್ಶನಗಳ “ಎ” ದರ್ಜೆಯ ಕಲಾವಿದರಾಗಿದ್ದಾರೆ. ಕುಮಾರರು ದೇಶ ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ
ಕಾರ್ಯಕ್ರಮಗಳನ್ನು ನೀಡಿದ್ದಾರೆ ಹಾಗೂ ಅನೇಕ ಗಣ್ಯ ಸನ್ಮಾನಗಳನ್ನು ಪಡೆದಿದ್ದಾರೆ.

Share This
300x250 AD
300x250 AD
300x250 AD
Back to top