ಅಂಕೋಲಾ: ಭರತ್ ಅಕಾಡೆಮಿ ಅವರ್ಸಾ ಶಾಖೆಯ ವತಿಯಿಂದ ದೇಶದ ಯುವಕ ಯುವತಿಯರಿಗಾಗಿ ಉಚಿತವಾಗಿ ಅಗ್ನಿವೀರ್ ಕೋಚಿಂಗ್ ಕ್ಯಾಂಪ್ ನಡೆಯಲಿದೆ ಎಂದು ಭಾರತೀಯ ಸೇನೆಯ ನಿವೃತ್ತ ಪ್ಯಾರಾ ಕಮಾಂಡರ್ ಫಿಸಿಕಲ್ ಟ್ರೈನರ್ ಸುಧೀರ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಏಪ್ರಿಲ್ 23ರಿಂದ 29ರವರೆಗೆ ನಡೆಯುವ ಶಿಬಿರದಲ್ಲಿ ಅಗ್ನಿವೀರ್ ತರಬೇತಿಗೆ ಸೇರಬಯಸುವವರು ಅದಕ್ಕೆ ಹೇಗೆಲ್ಲ ಪೂರ್ವ ತಯಾರಿಯನ್ನು ನಡೆಸಬೇಕು, ಯಾವ ಯಾವ ವಿಭಾಗಗಳಲ್ಲಿ ಆಯ್ಕೆಗಳನ್ನು ನಡೆಸಲಾಗುತ್ತದೆ, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಕ್ರಮ ಮುಂತಾದವುಗಳ ಕುರಿತು ಕೌಶಲ್ಯ ತರಬೇತಿಯನ್ನು ನೀಡಲಾಗುವದು. ಅವರ್ಸಾದ ಕಾತ್ಯಾಯನಿ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಶಿಬಿರಕ್ಕೆ ಈಗಾಗಲೇ ದೇಶದ ವಿವಿಧ ರಾಜ್ಯಗಳೂ ಸೇರಿದಂತೆ 8 ವರ್ಷ ವಯೋಮಾನದವರೂ ಸೇರಿದಂತೆ 50ಕ್ಕೂ ಹೆಚ್ಚು ಜನ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇನ್ನುಳಿದ ಆಸಕ್ತರು ತಮ್ಮ ಹೆಸರನ್ನು ಸಂಬಂಧಿಸಿದ ದಾಖಲಾತಿಗಳೊಂದಿಗೆ ಹಾಗೂ ಪಾಲಕರೊಂದಿಗೆ ಖುದ್ದು ಹಾಜರಾಗಿ ನೊಂದಾಯಿಸಿಕೊಳ್ಳತಕ್ಕದ್ದು ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿನಾಯಕ ನಾಯ್ಕ, ಸೂರಜ ಅಂಕೋಲೆಕರ, ಪ್ರೇಮ್ ಬಾನಾವಳಿಕರ, ರೋಶನ ಸಾಳಗಾಂವಕರ, ಶ್ರೀಕಾಂತ ನಾಯ್ಕ, ಶಿಖಾ ಎಸ್.ಮಾಳಸೇಕರ, ಚಂದ್ರಿಕಾ ಗೌಡ, ಹೇಮಂತ ಗೌಡ ಇದ್ದರು.