• Slide
  Slide
  Slide
  previous arrow
  next arrow
 • ಮನೆ ದರೋಡೆ ಮಾಡಿದ್ದ ಕಳ್ಳನ ಬಂಧನ

  300x250 AD

  ಶಿರಸಿ: ಕಳೆದ ಮಾ,28 ರಂದು ಕಸ್ತೂರಬಾ ನಗರದಲ್ಲಿ ಆಟೊ ಚಾಲಕನ ಮನೆಯ ಹಂಚು ತೆಗೆದು ಒಳಹೋಗಿ ಕಪಾಟಿನಲ್ಲಿದ್ದ 30 ಸಾವಿರ ರೂ ನಗದು ಸೇರಿದಂತೆ ಒಟ್ಟೂ 1.35ಲಕ್ಷ ರೂ. ಚಿನ್ನಾಭರಣ ಕಳ್ಳತನ ಮಾಡಿ ಪೋಲಿಸರಿಂದ ಮರೆಯಾಗಿದ್ದ ಆರೋಪಿ ಇಲ್ಲಿನ ನೆಹರು ನಗರದ ಯಾಸಿನ್ ಬಾಬಾಸಾಬ್ ಶೇಖ್ ಎಂಬಾತನನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

  ಡಿವಾಯೆಸ್ಪಿ ಗಣೇಶ ಕೆ. ಎಲ್. ಮಾರ್ಗದರ್ಶನ,ಸಿಪಿಆಯ್ ಮಂಜುನಾಥ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಮಾರ್ಕೆಟ್ ಪಿಎಸ್ಆಯ್ ಭೀಮಾಶಂಕರ ಮತ್ತಿತರರು ಪಾಲ್ಗೊಂಡಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top