ಮುಂಡಗೋಡ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರರ ಅಭಿವೃದ್ಧಿ ಪರ ಕಾರ್ಯಕ್ರಮ ಹಾಗೂ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ತಾಲೂಕಿನ ನಾಗನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಅಟ್ಟಣಗಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಸಚಿವರು ಕಾಂಗ್ರೆಸ್ ತೊರೆದ ಕಾರ್ಯಕರ್ತರಿಗೆ ಭಾರತೀಯ ಜನತಾ ಪಕ್ಷದ ಶಾಲು ಹಾಕಿ ಅತ್ಯಂತ ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿದರು.
ಅಟ್ಟಣಗಿ ಗ್ರಾಮ ಪಂಚಾಯಿತಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಕ್ಕಿರಸ್ವಾಮಿ ಅಂಡಗಿ, ಕಾಂಗ್ರೆಸ್‌ನ ಮಾಜಿ ಬೂತ್ ಅಧ್ಯಕ್ಷರಾದ ಸುರೇಶ್ ಸಂಭಾಂಜಿ, ಸಂತೋಷ ಹರಿಜನ, ರಮೇಶ್ ಹುನಗುಂದ ಹಾಗೂ ಶಿವಪ್ಪ ಹರಿಜನ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.