ಕುಮಟಾ: ಕೆನರಾ ಕ್ಷೇತ್ರದ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅವರ 81ನೇ ಜನ್ಮ ದಿನಾಚರಣೆಯನ್ನು ತಾಲೂಕಿನ ಮೊರಬಾದ ತಮ್ಮ ನಿವಾಸದಲ್ಲಿ ಹಲವು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ವಿತರಿಸುವ ಮೂಲಕ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡರು.
ತಾಲೂಕಿನ ಮೊರಬಾದ ಆಳ್ವಾ ನಿವಾಸದಲ್ಲಿ ತಮ್ಮ ಆಪ್ತರೊಂದಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರಿಗೆ ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳು, ಪಕ್ಷದ ಹಿರಿಯ-ಕಿರಿಯ ಮುಖಂಡರು ಶುಭಾಶಯ ಕೋರಿದರು. ಬಳಿಕ ಮಾತನಾಡಿದ ಮಾರ್ಗರೇಟ್ ಆಳ್ವಾ, ತಾವೆಲ್ಲರೂ ಇಲ್ಲಿ ಅಭಿಮಾನದಿಂದ ನನ್ನ ಜನ್ಮದಿನೋತ್ಸವ ಆಚರಿಸಲು ಬಂದಿದ್ದೀರಿ. ಪಕ್ಷದ ಹಿರಿಯ ನಾಯಕರು, ಗೆಳೆಯರು, ಹಳಬರು, ಹೊಸಬರು, ತುಂಬಾ ಸಂತೋಷದಿoದ ಒಂದಾಗಿ ಇಂದು ಸತತ ಎರಡು ಮೂರು ಗಂಟೆಗಳ ಕಾಲ ನನ್ನ ಸಂಭ್ರಾಮಚರಣೆಯನ್ನು ಬಹಳ ಸಂತೋಷವಾಗಿ ಆಚರಿಸಿದ್ದು ಖುಷಿ ನೀಡಿದೆ. ನಿಮ್ಮೆಲ್ಲರ ಆಗಮನ ನನಗೆ ಹೊಸ ಜೀವ ಬಂದoತಾಗಿದೆ. ಇದೇ ಪ್ರೀತಿ ವಿಶ್ವಾಸದೊಂದಿಗೆ ನಿಮ್ಮ ಜೊತೆಯಲ್ಲಿ ಇರುತ್ತೇನೆ. ನನ್ನ ಪುತ್ರ ನಿವೇದಿತಾ ಆಳ್ವಾ ಅವರನ್ನು ಬಹುಮತಗಳಿಂದ ಗೆಲ್ಲಿಸಿ ಎಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನನ್ನ ಜೀವಿತಾವಧಿಯಲ್ಲಿ ನನ್ನ ಮಗ ಚುನಾವಣೆ ಸ್ಪರ್ಧಿಸುವ ಮೊದಲ ಚುನಾವಣೆಯಾಗಿದೆ. ನಾವೆಲ್ಲರೂ ಒಂದಾಗಿ ಈ ಬಾರಿಯ 2023ರ ವಿಧಾನಸಭಾ ಚುನಾವಣೆಯನ್ನು ನಾವು ಗೆಲ್ಲಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಬೇಕು ಎಂದು ಕರೆನೀಡಿದರು. ಅಲ್ಲದೇ ಅಭಿಮಾನಿಗಳೊಂದಿಗೆ ಹಿಂದಿನ ದಿನಗಳನ್ನು ಮೆಲುಕು ಹಾಕಿಕೊಂಡು ಸಂತಸಪಟ್ಟರು.
ಈ ಸಂದರ್ಭದಲ್ಲಿ ನಿವೇದಿತಾ ಆಳ್ವಾ, ಅವರ ಪತ್ನಿ, ಸೊಸೆಯಂದಿರು, ಮೊಮ್ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ್, ಮುಖಂಡರಾದ ಪ್ರದೀಪ ನಾಯ್ಕ, ಯಶೋಧರ ನಾಯ್ಕ, ರತ್ನಾಕರ್ ನಾಯ್ಕ, ಆರ್.ಎಚ್.ನಾಯ್ಕ, ಕೃಷ್ಣ ಗೌಡ, ಚಂದ್ರು ಗೌಡ, ಧೀರು ಶಾನಭಾಗ, ಅಣ್ಣಯ್ಯ ನಾಯ್ಕ, ಭುವನ್ ಭಾಗವತ್, ಅಶೋಕ ಗೌಡ, ಪ್ರಾನ್ಸಿಸ್ ಫರ್ನಾಂಡೀಸ್, ಪುಷ್ಪಾ ಮಹೇಶ, ಸ್ಟೀಫನ್ ರೋಡ್ರಗೀಸ್, ಜಗದೀಪ್ ತೆಂಗೇರಿ, ಹರೀಶ ಶೇಟ್, ರಾಜು ನಾಯ್ಕ ಮಂಕಿ, ಬಾಲಚಂದ್ರ ನಾಯ್ಕ, ಶಂಕರ ಅಡಿಗುಂಡಿ, ಕೃಷ್ಣ ಹರಿಜನ್, ಸುರೇಶ ಮೇಸ್ತ, ಮಾದೇವ ನಾಯ್ಕ, ಚಂದ್ರಶೇಖರ್ ಚಾರೊಡಿ, ಕೃಷ್ಣ ಮಾರಿಮನೆ, ರಾಮಾ ಪಟಗಾತ್ ಬರ್ಗಿ, ಮೋಹನ ಆಚಾರಿ, ನಾಸೀರ್ ವಲ್ಲಿಖಾನ್, ಭುವನ್ ಭಾಗವತ್ ಸೇರಿದಂತೆ ಜಿಲ್ಲೆಯ ಅಪಾರ ಅಭಿಮಾನಿಗಳು ಪಾಲ್ಗೊಂಡಿದ್ದರು.