ದಾಂಡೇಲಿ: ತಾಲೂಕಿನ ಅಂಬಿಕಾನಗರದಲ್ಲಿ ಕರ್ನಾಟಕ ಬಹುಜನ ಚಳುವಳಿಯ ಗ್ರಾಮ ಶಾಖೆ ಮತ್ತು ಶಾಖೆಯ ಕಚೇರಿಯನ್ನು ಉದ್ಘಾಟಿಸಲಾಯಿತು.
ಕರ್ನಾಟಕ ಬಹುಜನ ಚಳುವಳಿಯ ಸಂಘಟನೆಯ ರಾಜ್ಯಾಧ್ಯಕ್ಷ ದೇವೆಂದ್ರ ಮಾದರ ಅವರು ನೂತನ ಶಾಖೆ ಮತ್ತು ಶಾಖೆಯ ಕಚೇರಿಯನ್ನು ಉದ್ಘಾಟಿಸಿ ಬಡಜನತೆಯ ಹಾಗೂ ದೀನ ದಲಿತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಸಮಾಜಮುಖಿ ಕರ‍್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ದೃಷ್ಟಿಯಿಂದ ಆರಂಭವಾದ ಸಂಘಟನೆಯೆ ಕರ್ನಾಟಕ ಬಹುಜನ ಚಳುವಳಿ ಸಂಘಟನೆ. ಸಂಘಟನೆಯ ಆಶಯದಂತೆ ಕರ‍್ಯನಿರ್ವಹಿಸಿ, ಈ ಭಾಗದ ಅಭಿವೃದ್ಧಿಗೆ ಕೈಜೋಡಿಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಬೇಕೆಂದು ಕರೆ ನೀಡಿದರು.
ಕರ್ನಾಟಕ ಬಹುಜನ ಚಳುವಳಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಮನ್ ಹರಿಜನ ಅವರು ಮಾತನಾಡಿ ಸಂಘಟನೆಯ ಉದ್ದೇಶವೆ ಸೌಹಾರ್ದತೆಯ ಸಮಾಜ ನಿರ್ಮಾಣವಾಗಿದೆ. ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಅನ್ಯಾಯದ ವಿರುದ್ಧ ಧ್ವನಿಯಾಗಿ ನಿಲ್ಲುವ ಮೂಲಕ ಸಂಘಟನೆ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರುಗಳಾದ ಗಿರೀಶ ಹರಿಜನ, ಮುತ್ತು ಸದಬ, ಚನ್ನಕೃಷ್ಣಯ್ಯ, ರೇಷ್ಮಾ ರಾಮಶ್ರೀ, ರಾಜ ವಡ್ಡರ್, ಬಾಬು, ರಾಮಾಶ್ರೀ, ರಾಮಸಾಗರ, ನಾಗೇಶ ನಾಯ್ಕ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.