• Slide
    Slide
    Slide
    previous arrow
    next arrow
  • ಮೋದಿಯನ್ನು ಮುತ್ಸದ್ಧಿ ಎಂದು ಹಾಡಿಹೊಗಳಿದ ಗುಲಾಂ ನಬಿ ಆಜಾದ್

    300x250 AD

    ನವದೆಹಲಿ: ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿಹೊಗಳಿದ್ದು, ಮೋದಿಯೊಬ್ಬ ಮುತ್ಸದ್ಧಿ ರಾಜಕಾರಣಿ ಎಂದು ಬಣ್ಣಿಸಿದ್ದಾರೆ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಮೋದಿಯನ್ನು ತುಂಬಾ ಉದಾರ ವ್ಯಕ್ತಿ ಎಂದು ಆಜಾದ್‌ ಬಣ್ಣಿಸಿದ್ದಾರೆ.

    ಕಳೆದ ವರ್ಷ ಕಾಂಗ್ರೆಸ್ ತೊರೆದು ತನ್ನದೇ ಆದ ರಾಜಕೀಯ ಸಂಘಟನೆಯಾದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿಯನ್ನು ಆಜಾದ್ ಸ್ಥಾಪಿಸಿದ್ದಾರೆ.

    “ನಾನು ಮೋದಿಯವರಿಗೆ ಮನ್ನಣೆ ನೀಡಬೇಕು. ನಾನು ಅವರಿಗೆ ಮಾಡಿದ ಕಾರ್ಯಗಳ ಬಗ್ಗೆ ಅವರು ಉದಾರವಾಗಿ ನಡೆದುಕೊಂಡರು. ವಿರೋಧ ಪಕ್ಷದ ನಾಯಕನಾಗಿ ನಾನು ಎಲ್ಲಾ ವಿಷಯದ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಆರ್ಟಿಕಲ್ 370 ಅಥವಾ ಸಿಎಎ ಅಥವಾ ಹಿಜಾಬ್ ವಿಷಯದಲ್ಲಿ ಟೀಕಿಸಿದ್ದೇನೆ. ಕೆಲವು ಮಸೂದೆಗಳು ಸಂಪೂರ್ಣವಾಗಿ ವಿಫಲವಾಗಿವೆ ಆದರೆ ರಾಜನೀತಿಜ್ಞರಂತೆ ವರ್ತಿಸಿದ ಕೀರ್ತಿ ಅವರಿಗೆ ನಾನು ನೀಡಬೇಕು, ಅವರು ನನ್ನ ಮೇಲೆ ಸೇಡು ತೀರಿಸಿಕೊಳ್ಳಲಿಲ್ಲ” ಎಂದು ಆಜಾದ್ ಹೇಳಿದ್ದಾರೆ.

    300x250 AD

    ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದ ನಂತರ ಆಜಾದ್ ಆಗಸ್ಟ್ 2022 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.

    ಆಜಾದ್ ಅವರನ್ನು ರಾಜ್ಯಸಭೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮೋದಿ ಭಾವನಾತ್ಮಕ ಭಾಷಣ ಮಾಡಿ ಆಜಾದ್‌ ಜೊತೆಗಿನ ಒಡನಾಟವನ್ನು ನೆನೆಸಿಕೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top