ಯಲ್ಲಾಪುರ: ಚಿಕ್ಕ ವಯಸ್ಸಿನಲ್ಲಿಯೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ತೋರಿದಂತ ಪ್ರತಿಭೆಗಳಿಗೆ ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾ ನೀಡುವ ರಾಜ್ಯ ಮಟ್ಟದ ಹವ್ಯಕ ಪಲ್ಲವ ಪುರಸ್ಕಾರವನ್ನು ಜಿಲ್ಲೆಯ ಯಲ್ಲಾಪುರ ಮೂಲದ ಶಮಾ ಭಾಗ್ವತ್’ಗೆ ಭಾನುವಾರ ಪ್ರದಾನ ಮಾಡಲಾಯಿತು.
ಭರತನಾಟ್ಯ ಕ್ಷೇತ್ರದಲ್ಲಿ ಎಳೆಯ ಹೆಜ್ಜೆಯಲ್ಲೇ ಘಟ್ಟಿ ಗುರುತು ಮೂಡಿಸುತ್ತಿರುವ ಶಮಾ, ಪ್ರಸ್ತುತ ಚಿತ್ರದುರ್ಗದಲ್ಲಿ ಏಳನೇ ತರಗತಿ ಓದುತ್ತಿದ್ದಾಳೆ. ಸೆಲ್ಕೋದ ಕ್ಷೇತ್ರೀಯ ಅಧಿಕಾರಿ ಮಂಜುನಾಥ ಭಾಗವತ್ ಹಾಗೂ ಉಪನ್ಯಾಸಕಿ, ಭರತನಾಟ್ಯ ಕಲಾವಿದೆ ಶ್ವೇತಾ ಭಟ್ಟ ಕಾನಸೂರು ಅವರ ಪ್ರಥಮ ಪುತ್ರಿ.
ಶ್ರೀ ಅಖಿಲ ಹವ್ಯಕ ಮಹಾಸಭಾ ಸಂಸ್ಥಾಪನ ಮಹೋತ್ಸವ ಕಾರ್ಯಕ್ರಮ ದಲ್ಲಿ ಹವ್ಯಕ ಪಲ್ಲವ ಪುರಸ್ಕಾರವನ್ನು ಅಧ್ಯಕ್ಷ, ಪ್ರಸಿದ್ಧ ವೈದ್ಯ ಡಾ. ಗಿರಿಧರ ಖಜೆ, ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಎಂ.ಕೆ.ಭಾಸ್ಕರರಾವ್ ಇತರರು ಇದ್ದರು.