• Slide
  Slide
  Slide
  previous arrow
  next arrow
 • ಬೈಕ್ ರ‍್ಯಾಲಿ ಮೂಲಕ ಮತದಾನದ ಜಾಗೃತಿ ಮೂಡಿಸಿದ ಅಧಿಕಾರಿಗಳು

  300x250 AD

  ಕಾರವಾರ: ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ನಗರದಲ್ಲಿ ಸರ್ಕಾರಿ ನೌಕರರು ಬೈಕ್ ರ‍್ಯಾಲಿ ನಡೆಸಿದರು.

  ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಈ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಪಂಚಾಯತಿ ಸಿಇಓ ಈಶ್ವರ ಖಂಡೂ, ಪ್ರೊಬೆಶನರಿ ಐಎಎಸ್ ಅಧಿಕಾರಿ ಜುಬಿನ್ ಮಹಾಪಾತ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದಾದ್ಯಂತ ಬೈಕ್ ಓಡಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.

  300x250 AD

  ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಿಂದ ಹೊರಟ ರ‍್ಯಾಲಿ ಸುಭಾಷ್ ಸರ್ಕಲ್, ಸವಿತಾ ಸರ್ಕಲ್, ಕಾಜುಬಾಗ್ ರೋಡ್ ಮುಖಾಂತರ ಕಾಳಿ ನದಿ ಗಾರ್ಡನ್ ಮೂಲಕ ಹಾದು ಖಾಪ್ರಿ ದೇವಸ್ಥಾನ ಮೂಲಕ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಹತ್ತಿರ ಮುಕ್ತಾಯಗೊಂಡಿತು.

  Share This
  300x250 AD
  300x250 AD
  300x250 AD
  Leaderboard Ad
  Back to top