• Slide
  Slide
  Slide
  previous arrow
  next arrow
 • ಕಾಂಗ್ರೆಸ್ ಬ್ಯಾನರ್‌ಗೆ ಹಾನಿ; ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

  300x250 AD

  ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯ ಅರೇಅಂಗಡಿಯ ಸರ್ಕಲ್ ಬಳಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಬೆಂಬಲಿಗರು ಅಳವಡಿಸಿದ್ದ ಬ್ಯಾನರ್‌ಗೆ ಸಗಣಿ ಎರಚಿ ಕತ್ತರಿಸಿ ಹಾನಿ ಮಾಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಕಾಂಗ್ರೆಸ್ ಬೆಂಬಲಿಸಿ, ಮುಂದಿನ ದಿನದಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೇ ಘೋಷಣೆಯಾದ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಪ್ರಚಾರದ ಬ್ಯಾನರ್ ಇತ್ತಿಚೀಗೆ ಕಾರ್ಯಕರ್ತರು ಅಳವಡಿಸಿದ್ದರು. ಭಾನುವಾರ ರಾತ್ರಿ ಕಿಡಿಗೇಡಿಗಳು ಈ ಬ್ಯಾನರ್ ಹರಿದಿದ್ದು, ಉದ್ದೇಶಪೂರ್ವಕವಾಗಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಶಾಸಕಿ ಶಾರದಾ ಶೆಟ್ಟಿ ಭಾವಚಿತ್ರದ ಬಳಿ ಸಗಣಿ ಎರಚಿ ವಿರೂಪಗೊಳಿಸಿದ್ದಾರೆ. ಈ ಕೃತ್ಯ ಹೇಯವಾಗಿದ್ದು, ಯಾರು ಇದನ್ನು ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಇಂತಹ ಶಾಂತಿ ಕದಲುವ ರಾಜಕೀಯ ಕೃತ್ಯ ಯಾರು ಮಾಡುವ ಕೀಳುಮಟ್ಟಕ್ಕೆ ಇಳಿಯಬಾರದು. ಮುಂದಿನ ದಿನದಲ್ಲಿ ಸಾಕ್ಷಿ ಸಮೇತ ಈ ಕೃತ್ಯ ಮಾಡಿದವರ ಫೋಟೊ ಸಮೇತ ಬಹಿರಂಗಪಡಿಸುವ ಜೊತೆ ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ವಿನೋದ ನಾಯ್ಕ ಎಚ್ಚರಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top