• Slide
    Slide
    Slide
    previous arrow
    next arrow
  • ಮುಡಗೇರಿ ರೈತರಿಗೆ ಚೆಕ್ ವಿತರಿಸಿದ ಕೈಗಾರಿಕಾ ಸಚಿವ ನಿರಾಣಿ

    300x250 AD

    ಕಾರವಾರ: ಜನರ ಕೆಲಸ ಮಾಡುವುದರಲ್ಲಿ, ಕ್ಷೇತ್ರದ ಅಭಿವೃದ್ಧಿ ಮಾಡುವುದರಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾದರಿಯಾಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಹೇಳಿದರು.

    ತಾಲೂಕಿನ ಮುಗಡೇರಿಯಲ್ಲಿ ಭೂಮಿ ವಶಪಡಿಸಿಕೊಂಡ ರೈತರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿ ಮಾತನಾಡಿದ ಅವರು, ಮುಡಗೇರಿಯಲ್ಲಿ 2005 ರಿಂದ 2023ರವರೆಗೆ ರೈತರು ಪರಿಹಾರಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದರು. ಒಂದು ಬಾರಿ ಕೆಐಡಿಬಿ ವಶಕ್ಕೆ ಪಡೆಸಿಕೊಂಡರೇ ಆಗ ಜಾಗ ಮಾರಾಟ ಮಾಡಲು, ಸಾಲ ಪಡೆಯಲು ಆಗುವುದಿಲ್ಲ. 2008 ರಲ್ಲಿ ಕೈಗಾರಿಕೆ ಸಚಿವ ಇದ್ದಾಗ 10 ಲಕ್ಷ ಕೊಡಲು ನಾನೇ ಒಪ್ಪಿದ್ದೆ. ರೈತರು ಶಾಸಕಿ ರೂಪಾಲಿ ನಾಯ್ಕ ಬಳಿ ಒತ್ತಾಯ ಮಾಡಿದಾಗ ನನ್ನ ಗಮನಕ್ಕೆ ಬಂದಿದ್ದರು ಎಲ್ಲಾ ಲೆಕ್ಕಾಚಾರ ಮಾಡಿದಾಗ 40 ಲಕ್ಷ ಪರಿಹಾರ ಕೊಡಲು ಆಗುತ್ತಿರಲಿಲ್ಲ. ರೂಪಾಲಿ ನಾಯ್ಕ ಬಿಡದೇ ಪಟ್ಟು ಹಿಡಿದಿದ್ದರಿಂದ 50 ಲಕ್ಷ ಪರಿಹಾರ ಎಕರೆಗೆ ಕೊಡುತ್ತಿದ್ದೇವೆ ಎಂದರು.

    300x250 AD

    50 ಲಕ್ಷ ಪರಿಹಾರ ಕೊಡುತ್ತಿರುವ ಕ್ರೆಡಿಟ್ ಮುಖ್ಯಮಂತ್ರಿಗೆ, ಕೈಗಾರಿಕೆ ಸಚಿವರಾದ ನನಗೆ ಬರುವುದಿಲ್ಲ. ಶಾಸಕಿ ರೂಪಾಲಿ ನಾಯ್ಕ ಅವರಿಗೆ ಕ್ರೆಡಿಟ್ ಬರುತ್ತದೆ. ನನ್ನ ಕ್ಷೇತ್ರದಲ್ಲಿ 2 ಸಾವಿರ ಎಕರೆ ಭೂಮಿ ವಶಕ್ಕೆ ಪಡೆದಿದ್ದರು.ಆದರೆ ಎಕರೆಗೆ 18 ಲಕ್ಷ ಮಾತ್ರ ಪರಿಹಾರ ಕೊಟ್ಟಿದ್ದರು. ಆದರೆ ಶಾಸಕರು ನಮ್ಮನೇ ಮನವೊಲಿಸಿ 50 ಲಕ್ಷ ಪರಿಹಾರ ಕೊಡುವಂತೆ ಮಾಡಿದ್ದಾರೆ. ನಾನು ಹಲವು ಖಾತೆ ನಿಬಾಯಿಸಿದ್ದೇನೆ. ನನ್ನ ಬಳಿ ಹಲವು ಶಾಸಕರು ಕೆಲಸಕ್ಕೆಂದು ಬರುತ್ತಾರೆ. ಆದರೆ ಶಾಸಕಿ ರೂಪಾಲಿ ನಾಯ್ಕ ವಿಭಿನ್ನ. ಜನರ ಕೆಲಸ, ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಪಟ್ಟು ಹಿಡಿಯುವುದು ನೋಡಿದರೆ ಮಾದರಿ ಶಾಸಕಿ ಎಂದು ಕರೆದರೆ ತಪ್ಪಾಗುವುದಿಲ್ಲ ಎಂದಿದ್ದಾರೆ ಎಂದರು.
    ಮುಡಗೇರಿಯಲ್ಲಿ ಕೈಗಾರಿಕೆ ಶೀಘ್ರದಲ್ಲೇ ಬರುತ್ತದೆ. ಅಲ್ಲಿ ಸ್ಥಳೀಯರಿಗೆ ಉದ್ಯೋಗ ಮೊದಲ ಆದ್ಯತೆ ಕೊಡುತ್ತೇವೆ. ಅಲ್ಲದೇ ಭೂಮಿ ನೀಡಿದವರು ತಮಗೆ ಪರಿಹಾರ ಬೇಡ ಕೈಗಾರಿಕಾ ಜಾಗ ಬೇಕು ಎಂದರೆ ಅದನ್ನ ಸಹ ಕೊಡಲು ಸಿದ್ದರಿದ್ದೇವೆ. ಮುಗಡೇರಿಯಲ್ಲಿ ಕೈಗಾರಿಕೆ ಆದರೆ ಗೋವಾಕ್ಕೆ ಕೆಲಸಕ್ಕೆಂದು ಅಲೆದಾಡುವುದು ತಪ್ಪುತ್ತದೆ ಎಂದರು. ಬೆಂಗಳೂರಿನಲ್ಲಿ ಗ್ಲೋಬಲ್ ಇನ್ವೆಸ್ಟ್ ಕಾರ್ಯಕ್ರಮದಲ್ಲಿ ಹತ್ತು ಲಕ್ಷ ಕೋಟಿ ಹಣ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿದ್ದೇವೆ. ಕಾರವಾರಕ್ಕೂ ಕೈಗಾರಿಕೆ ತರಲು ಪ್ರಯತ್ನ ಮಾಡುತ್ತೇವೆ ಎಂದರು.
    ಕೈಗಾರಿಕೆ ಮಾಡಲು ಮುಂದಾದರೆ ಸರ್ಕಾರದಿಂದ ಸಬ್ಸಿಡಿ ಹಣ ಕೊಡಲಾಗುವುದು. ಜೊತೆಗೆ ಬ್ಯಾಂಕ್ ಸಾಲ ಸಹ ಪಡೆಯಬಹುದು. ನೀವೆ ಉದ್ಯೋಗ ಸೃಷ್ಟಿ ಈ ಮೂಲಕ ಮಾಡಬಹದು. ಕೈಗಾರಿಕೆ ಮಾಡಲು ಆಸಕ್ತಿ ಇರುವವರಿಗೆ ಇಲಾಕೆಯಿಂದ ತರಬೇತಿ ಸಹ ಕೊಡಲಾಗುವುದು. ಮುಡಗೇರಿ ಭಾಗದಲ್ಲಿ ಜನರು ಆಸಕ್ತಿ ವಹಿಸಿದರೆ ಕೈಗಾರಿಕೆ ಮಾಡುವ ತರಬೇತಿ ಕೊಡಲಾಗುವುದು ಎಂದರು. ನಾನೊಬ್ಬ ಸಾಮಾನ್ಯ ರೈತರ ಮಗನಾಗಿದ್ದು ಕೈಗಾರಿಕೆ ಪ್ರಾರಂಭಿಸಿ ಇಂದು 72 ಸಾವಿರ ಜನರಿಗೆ ಉದ್ಯೋಗ ಕೊಟ್ಡಿದ್ದೇನೆ. ಕಾರವಾರದ ಜನರು ಮೀನು ತಿನ್ನುವ ಜನರು,  ನಮಗಿಂತ ಬುದ್ದಿವಂತರು, ಬುದ್ದಿವಂತಿಕೆಯಲ್ಲಿ ಸರ್ಕಾರದ ಯೋಜನೆ ಬಳಸಿಕೊಂಡು ಕೈಗಾರಿಕೆ ಮಾಡಿದರೆ ದೊಡ್ಡ ಮಟ್ಡದಲ್ಲಿ ಬೆಳೆಯುವ ಅವಕಾಶ ಇದೆ ಎಂದರು.
    ವೇದಿಕೆಯಲ್ಲಿ ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ನಿತೀನ್ ಪಿಕಳೆ, ಕಾರವಾರ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇನ್ನು ಕಾರ್ಯಕ್ರಮದಲ್ಲಿ ಸಚಿವ ಮುರಗೇಶ್ ನಿರಾಣಿ ಅವರಿಗೆ ಶಾಸಕಿ ರೂಪಾಲಿ ನಾಯ್ಕ ಬೃಹತ್ ವಿಗ್ರಹ ಹಾಗೂ ಬೆಳ್ಳಿ ಗದೆಯನ್ನ ನೀಡಿ ಸನ್ಮಾನಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top