• Slide
    Slide
    Slide
    previous arrow
    next arrow
  • `ಉಳುವವನೆ ಹೊಲದೊಡೆಯ’ ಸುವರ್ಣ ಸಂಭ್ರಮ; ಜನಪರ ಕಾರ್ಯಕ್ರಮ ಆಚರಿಸಲು ನಿರ್ಧಾರ

    300x250 AD

    ಹೊನ್ನಾವರ: ಈ ದೇಶ ಕಂಡ ಅಪರೂಪದ ರಾಜಕಾರಿಣಿ, ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರು `ಉಳುವವನೆ ಹೊಲದೊಡೆಯ’ ಎಂಬ ಭೂ ಸುಧಾರಣಾ ಕಾನೂನು ಜಾರಿಗೆ ತಂದು 50 ವರ್ಷಗಳು ತುಂಬುತ್ತಲಿದೆ. 2023- 24ಕ್ಕೆ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭ ಬಂದಿದೆ. ಈ ನಿಟ್ಟಿನಲ್ಲಿ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲು ಉತ್ತರ ಕನ್ನಡ ಜಿಲ್ಲಾ ದೇವರಾಜ್ ಅರಸು ವಿಚಾರೆ ವೇದಿಕೆ ನಿರ್ಧರಿಸಿದೆ ಎಂದು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಅವರು ತಿಳಿಸಿದ್ದಾರೆ.

    ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಇಂದಿಗೂ ಸಾವಿರಾರು ರೈತರು ಸಂಪೂರ್ಣ ಭೂ ಒಡೆತನದ ಹಕ್ಕು ಪಡೆಯಲಾಗದೇ ಪರಿತಪಿಸುತ್ತಿದ್ದಾರೆ. ಇದಕ್ಕೆ ಆಡಳಿತ ವ್ಯವಸ್ಥೆಯ ವೈಫಲ್ಯವೇ ಕಾರಣ. ಭೂ ಮಂಜೂರಾತಿಗಾಗಿ ರೈತರು ಸಲ್ಲಿಸಿದ ಅರ್ಜಿ ನಮೂನೆ `7′ ಮತ್ತು `7 ಅ’ ಅರ್ಜಿಗಳು ಸಂಪೂರ್ಣ ವಿಚಾರಣೆ ಆಗದೇ ಬಾಕಿ ಉಳಿದಿರುವುದು ಒಂದು ಕಾರಣವಾದರೆ, ಹಲವಾರು ಅರ್ಜಿಗಳು ವಿಚಾರಣೆ ಮುಗಿದು ಆದೇಶ ಆಗಿ ಪಟ್ಟ ನೀಡಲ್ಪಟ್ಟಿದ್ದರೂ ಸಹ ಪಹಣಿಯಲ್ಲಿ ಕರ್ನಾಟಕದ ಸರ್ಕಾರದ ಹಕ್ಕು ಕಡಿಮೆಯಾಗದಿರುವುದು ಇನ್ನೊಂದು ಕಾರಣವಾಗಿದೆ. ಹಾಗೆಯೇ ಇಲಾಖೆಯ ತಾಂತ್ರಿಕ ದೋಷದಿಂದಲೋ, ಕಣ್ತಪ್ಪಿನಿಂದಲೋ, ಬೇಜವಾಬ್ದಾರಿತನದಿಂದಲೋ ಹಲವಾರು ರೈತರ ಪಹಣಿಗಳು ದೋಷಪೂರಿತವಾಗಿದೆ. ಈ ಕುರಿತು ರೈತರು ಎಲ್ಲಾ ದಾಖಲೆಗಳನ್ನು ಇಟ್ಟು ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಆದ ಕಾರಣ ಜಿಲ್ಲಾಧೀಕಾರಿಗಳು ಈ ದಿಶೆಯಲ್ಲಿ ಮುಂದಿನ ದಿನಗಳಲ್ಲಿ ವಿಶೇಷ ಆಂದೋಲನ ಹಮ್ಮಿಕೊಳ್ಳುವುದು ಸೂಕ್ತ.
    ಇಂದಿನ ಆಡಳಿತ ಸರ್ಕಾರ `ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’, `ರೈತರ ಮನೆಬಾಗಿಲಿಗೆ ಕಂದಾಯ ದಾಖಲೆ’, `ಪೋಡಿ ಮುಕ್ತ ಗ್ರಾಮ’, `ಕಡತ ವಿಲೇವಾರಿ ಸಪ್ತಾಹ’ ಇತ್ಯಾದಿಯಾಗಿ ನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದರಿಂದ ಎಷ್ಟರಮಟ್ಟಿಗೆ ಜನರಿಗೆ ಅನುಕೂಲವಾಗಿದೆ ಎಂಬುದನ್ನು ಆತ್ಮವಿಮರ್ಶೆಮಾಡಿಕೊಳ್ಳಬೇಕಿದೆ. `ರೈತರ ಮನೆಬಾಗಿಲಿಗೆ ಕಂದಾಯ ದಾಖಲೆ’ ಎಂಬುದು ಸಂಪೂರ್ಣ ಪ್ರಯೋಜನಕ್ಕೆ ಬಾರದ ಕಾರ್ಯಕ್ರಮವಾಗಿದೆ. `ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಎನ್ನುವ ಕಾರ್ಯಕ್ರಮವನ್ನೇ `ಕರ್ನಾಟಕ ಸರ್ಕಾರ ಮುಕ್ತ ಪಹಣಿ ಕಾರ್ಯಕ್ರಮ’ವನ್ನಾಗಿ ಹಮ್ಮಿಕೊಳ್ಳಬಹುದಾಗಿತ್ತು. ಆದ್ದರಿಂದ ಅರಸು ವಿಚಾರ ವೇದಿಕೆ ಮುಂದಿನ ಆರ್ಥಿಕ ವರ್ಷವನ್ನು ರೈತರು ಭೂ ಮಂಜೂರಾತಿಗಾಗಿ ಸಲ್ಲಿಸಿದ ಅರ್ಜಿ ನಮೂನೆ 7 ಮತ್ತು 7 ಅ ಇದರ ವಿಚಾರಣೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಆಗ್ರಹಿಸಲಿದೆ. ರೈತರ ಪಹಣಿ ಕರ್ನಾಟ ಸರ್ಕಾರ ಮುಕ್ತ ಪಹಣಿಯಾಗಬೇಕು ಹಾಗೂ ಇನ್ನಿತರ ಸಮಸ್ಯೆಗಳಿಗಾಗಿ ಡಿ.ದೇವರಾಜ ಅರಸು ವಿಚಾರ ವೇದಿಕೆ ಉಗ್ರ ಹೋರಾಟ ನಡೆಸಲಿದ್ದು, `ಉಳುವವನೆ ಹೊಲದೊಡೆಯ’ ಎಂಬ ಪವಿತ್ರ ಕಾರ್ಯಕ್ರಮದ ಸುವರ್ಣ ಮಹೋತ್ಸವವನ್ನು ಆಚರಿಸಲು ಸಿದ್ಧತೆ ನಡೆಸಿದೆ. ಆದ್ದರಿಂದ ಜಿಲ್ಲೆ ಹಾಗೂ ಎಲ್ಲಾ ತಾಲೂಕಿನ ಆಸಕ್ತ ಗೇಣಿದಾರರು `ಯಾ’ ಕಬ್ಜಾದಾರರು, ರೈತರು ದಿ. ಡಿ.ದೇವರಾಜ ಅರಸು ವೇದಿಕೆಯೊಂದಿಗೆ ಕೈ ಜೋಡಿಸಬೇಕು ಮತ್ತು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಈ ಆಂದೋಲನ ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top