• Slide
    Slide
    Slide
    previous arrow
    next arrow
  • ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ: ಸ್ಪಂದಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

    300x250 AD

    ಶಿರಸಿ : ಭೀಮಘರ್ಜನೆ ಶಿರಸಿ ಹಾಗೂ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ನೇತೃತ್ವದಲ್ಲಿ ನಗರದ ಲಕ್ಶ್ಮಿ ಟಾಕೀಸ್ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ 16 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಎಪ್ರೀಲ್ ತಿಂಗಳ ಅಂತ್ಯದಲ್ಲಿ ನಿರ್ಮಾಣ ಮಾಡಲು ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಸರ್ಕಾರ ಕೂಡಲೇ ಈ ಮನವಿಗೆ ಸ್ಪಂದಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಭೀಮಘರ್ಜನೆ ಶಿರಸಿ ವತಿಯಿಂದ ಹೋರಾಟ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ , ಈ ದೇಶಕ್ಕೆ ಸಂವಿಧಾನ ಕೊಟ್ಟು ಭಾರತೀಯರೆಲ್ಲರಿಗೂ ಯಾವುದೆ ಜಾತಿ ಮತ ಪಂಥದ ಭೇದವಿಲ್ಲದೆ ಸಂವಿಧಾನ ಕೊಟ್ಟಂತಹ ಮಹಾನ್ ವ್ಯಕ್ತಿಯ ಪುತ್ಥಳಿ ನಮ್ಮ ಶಿರಸಿ ನಗರದಲ್ಲಿ ಇಲ್ಲದೆ ಇರುವುದು ನಮಗೆ ಬೇಸರದ ಸಂಗತಿಯಾಗಿದೆ. ಹಾಗಾಗಿ ನಾವೆಲ್ಲರೂ ಯಾವುದೆ ಜಾತಿ ಮತ ಧರ್ಮದ ಭೇದವಿಲ್ಲದೆ ಒಗ್ಗಟ್ಟಾಗಿ ಬಾಬಸಾಹೆಬರ ಪುತ್ಥಳಿಯನ್ನು ಆದಷ್ಟು ಬೇಗನೆ ನಿರ್ಮಾಣ ಮಾಡಲು ಇನ್ನೂ ಹೆಚ್ಚಿನದಾಗಿ ಶ್ರಮವಹಿಸಬೆಕೆಂದು ತಿಳಿಸಿದರು.

    ಉಪಾಧ್ಯಕ್ಷ ಅರ್ಜುನ ಮಿಂಟಿ ಮಾತನಾಡಿ ನಾವು ಇದಾಗಲೆ ಮಾನ್ಯ ತಹಶಿಲ್ದಾರರಿಗೆ ಪುತ್ಥಳಿ ನಿರ್ಮಾಣಕ್ಕಾಗಿ ಮನವಿಯನ್ನು ಸಲ್ಲಿಸಿದ್ದೇವೆ . ಇಲ್ಲಿಯವರೆಗೂ ನಮಗೆ ಯಾವುದೆ ರೀತಿಯ ಸ್ಪಂದನೆ ಬಂದಿರುವುದಿಲ್ಲ‌. ಹಾಗಾಗಿ ನಾವು ಈಗ ಸಹಾಯಕ ಆಯುಕ್ತರ ಮೂಲಕ ಸರ್ಕಾರದ ಗಮನಕ್ಕೆ ಮತ್ತೊಮ್ಮೆ ತರಲು ಮನವಿಯನ್ನು ಸಲ್ಲಿಸಿರುತ್ತೆವೆ. ಈ ತಿಂಗಳ ಎಪ್ರಿಲ್ ಅಂತ್ಯದೊಳಗಡೆ ನಮಗೆ ಪುತ್ಥಳಿ ನಿರ್ಮಾಣವಾಗದೆ ಇದ್ದಲ್ಲಿ ನಾವು ಹೋರಾಟದ ಹಾದಿಯನ್ನು ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು‌‌.

    300x250 AD

    ಈ ಸಂದರ್ಭದಲ್ಲಿ ಭೀಮಘರ್ಜನೆ ಶಿರಸಿ ಸಂಘಟನೆಯ ಅಧ್ಯಕ್ಷರಾದ ಸಂಜಯ ಜೊಗಳೆಕರ್, ಉಪಾಧ್ಯಕ್ಷರಾದ ಅರ್ಜುನ್ ಮಿಂಟಿ, ಕಾರ್ಯದರ್ಶಿಯಾದ ಭಾರ್ಗವ ‌ಕೆ., ಅಕ್ಷಯ, ಆದರ್ಶ ನಾಯ್ಕ, ಅರುಣ್ ಗೌಡ ಮಳಲಿ, ಮತ್ತು ಸಂಘಟನೆಯ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top