• Slide
    Slide
    Slide
    previous arrow
    next arrow
  • ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನ: ಆರೋಪಿಗಳ ಬಂಧನ

    300x250 AD

    ಯಲ್ಲಾಪುರ: ಪಟ್ಟಣದ ಹೊರ ವಲಯದಲ್ಲಿರುವ ಸವಣಗೇರಿಯ ದುರ್ಗಾಂಬಾ ಸೇಲ್ಸ್ ವಕಾರಿಯಿಂದ ಅಡಿಕೆ ಕದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಕುಮಟಾ ತಾಲೂಕಿನ ಮಾಸೂರಿನ ಮಹೇಶ ಈರಾ ಗೌಡ, ಯಲ್ಲಾಪುರದ ಇಸ್ಲಾಂ ಗಲ್ಲಿಯ ಸಮ್ರಾಜ ಅಬ್ದುಲ್ ಸಾಬ ಬಡಗಿ, ಉದ್ಯಮನಗರದ ಪರಶುರಾಮ ಬಾಬು ಕಾಂಬಳೆ, ಕುಮಟಾ ತಾಲೂಕಿನ ಹೊಸೇರಿಯ ಶಶಿಧರ ಲಿಂಗಪ್ಪ ಪಟಗಾರ, ಹರೀಶ ಮಾರಪ್ಪ ಪಟಗಾರ, ನವೀನ ಶ್ರೀಪಾದ ಪಟಗಾರ ಬಂಧಿತ ಆರೋಪಿಗಳಾಗಿದ್ದಾರೆ.

    ಕಳೆದ ಮಾ.13 ರಂದು ರಾತ್ರಿ ಸವಣಗೇರಿಯ ದುರ್ಗಾಂಬಾ ಸೇಲ್ ವಕಾರಿಯ ಮೇಲ್ಲಾವಣಿಯನ್ನು ತೆಗೆದು ಒಳನುಗ್ಗಿ 4 ಕ್ವಿಂಟಾಲ್ ಚಾಲಿ ಅಡಕೆ ಹಾಗೂ 80 ಕೆ.ಜಿ ಕೆಂಪು ಅಡಕೆ ಸೇರಿ ಒಟ್ಟು 1.45 ಲಕ್ಷ ರೂ ಮೌಲ್ಯದ ಅಡಕೆ ಕಳವು ಮಾಡಿದ್ದರು. ಈ ಕುರಿತು ವಕಾರಿಯ ಮಾಲೀಕ ಗಣೇಶ ಭಟ್ಟ ದೂರು ನೀಡಿದ್ದರು.

    300x250 AD

    ಪ್ರಕರಣ ದಾಖಲಿಸಿಕೊಂಡ ಪೊಲೀಸರು 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಕಳ್ಳತನ ಮಾಡಿದ 4 ಕ್ವಿಂಟಾಲ್ ಅಡಕೆ, ಕೃತ್ಯಕ್ಕೆ ಬಳಸಿದ ಆಟೊರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top