Slide
Slide
Slide
previous arrow
next arrow

ಕವಲಕ್ಕಿಯಲ್ಲಿ ಮಹಿಳಾ ಚೈತನ್ಯ ದಿನಾಚರಣೆ

300x250 AD

ಹೊನ್ನಾವರ: ತಾಲೂಕಿನ ಕವಲಕ್ಕಿಯ ಹೃದಯ ಭಾಗವಾದ ಮೈತ್ರಿ ಆವರಣದಲ್ಲಿ ಸಮತಾ ಸೋದರಿಯರ ಬಳಗದಿಂದ ಮಹಿಳಾ ಚೈತನ್ಯ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು.
ವೇದಿಕೆಯ ಮೇಲೆ   ಬದುಕಿನಲ್ಲಿ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಮೇಲಕ್ಕೆ ಬಂದ ವಿವಿಧ ಕ್ಷೇತ್ರದ ಹೆಣ್ಣು ಮಕ್ಕಳು, ತಾಯಂದಿರು ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಅನುಭವ ಕಥನವನ್ನು ಹಂಚಿಕೊಂಡರು.

ಡಾ.ಸುಮಾ ಭಟ್ ತಮ್ಮ ಅನುಭವ ಕಥನದೊಂದಿಗೆ ವೈದ್ಯಕೀಯ ಕ್ಷೇತ್ರದ ಕೆಲವು ಘಟನೆಗಳನ್ನು ಸ್ಮರಿಸಿಕೊಂಡು ಹೆಣ್ಣು ಮಕ್ಕಳಿಗೆ ಕಿವಿಮಾತುಗಳನ್ನು ಹೇಳಿದರು. ಲೇಖಕಿ, ಶಿಕ್ಷಕಿ ಸುಧಾ ಭಂಡಾರಿ ತನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಎದುರಾದ ಸಂಕೀರ್ಣ, ಭಾವನಾತ್ಮಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಮೇಲಕ್ಕೆ ಬಂದ ತಮ್ಮ ಅನುಭವವನ್ನು ಸವಿಸ್ತಾರವಾಗಿ ಬಿಚ್ಚಿಟ್ಟರು.

ಉಪನ್ಯಾಸಕಿ ಕಾವ್ಯಶ್ರೀ ಮಾತನಾಡಿ ತಾವು ಎದುರಿಸಿದ ಸವಾಲುಗಳನ್ನು ತಮ್ಮಂತ ಹೆಣ್ಣು ಮಕ್ಕಳೆಲ್ಲ ಸೇರಿ ದಿಟ್ಟತನದಿಂದ ಒಂದು ಸಣ್ಣ ಕ್ರಾಂತಿಯನ್ನೇ ಮಾಡಿ ಬದಲಾಯಿಸಿದ ಘಟನೆಯನ್ನು ಸ್ಮರಿಸಿಕೊಂಡರು. ಸಮತಾ ಸೋದರಿಯರ ಬಳಗ ಮತ್ತು ಸುತ್ತಮುತ್ತಲಿನ ಗ್ರಾಮದ ತಾಯಂದಿರು, ಹೆಣ್ಣು ಮಕ್ಕಳು ಜಾನಪದ ನೃತ್ಯ, ಕೋಲಾಟ, ಛದ್ಮವೇಷ ಪ್ರದರ್ಶಿದರು. ದೂರದ ಸಾಗರದಿಂದ ಬಂದ ಕೃತಿ ಹೆಗಡೆ ತಾವೇ ರಚಿಸಿದ ‘ಪದ್ಮಾವತಿ ಕಾಳಗ’ ಎನ್ನುವ ಹಾಸ್ಯ ಪ್ರಸಂಗವನ್ನು ಕವಯತ್ರಿ ಮಾಧವಿ ಭಂಡಾರಿ, ಮಹಿಳಾ ಹೋರಾಟಗಾರ್ತಿ ವಾಣಿ ಪೆರಿಯಾರ್ ಜೊತೆಗೂಡಿ ತಾಳಮದ್ದಳೆಯನ್ನು ಪ್ರದರ್ಶಿಸಿದರು. 

300x250 AD

ಪವಿತ್ರ ನಾಯ್ಕ ಸಾವಿತ್ರಿಬಾಯಿ ಪುಲೆ ಏಕಪಾತ್ರ ಅಭಿನಯವನ್ನು ಭಾವಪೂರ್ಣವಾಗಿ ಅಭಿನಯಿಸಿದರು. ಶ್ವೇತಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರೆ, ಸಂಘಟಕಿ ಡಾ.ಎಚ್.ಎಸ್.ಅನುಪಮಾ ಸ್ತ್ರೀ ಸಮಾನತೆ, ಸ್ವಾತಂತ್ರ‍್ಯದ ಅರಿವಿನ ಬಗ್ಗೆ ಮಾತನಾಡಿದರು.

Share This
300x250 AD
300x250 AD
300x250 AD
Back to top