• Slide
  Slide
  Slide
  previous arrow
  next arrow
 • ಶ್ರೀ ಗುಬ್ಬಿ ನಂಜುಂಡೇಶ್ವರ ಸೇವಾ ರತ್ನ ಪ್ರಶಸ್ತಿ‌ ಪಡೆದ ಬೀಳೂರಿನ ಮಂಜುನಾಥ ನಾಯ್ಕ್

  300x250 AD

  ಶಿರಸಿ: ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್ ವತಿಯಿಂದ ಕೊಡಮಾಡುವ ಶ್ರೀ ಗುಬ್ಬಿ ನಂಜುಂಡೇಶ್ವರ ಸೇವಾ ರತ್ನ ಪ್ರಶಸ್ತಿಯನ್ನು ತಾಲೂಕಿನ ಬಿಳೂರು ಗ್ರಾಮದ ಮಂಜುನಾಥ ನಾಯ್ಕ ಅವರಿಗೆ ನೀಡಿ ಗೌರವಿಸಲಾಯಿತು.

  ಹಾನಗಲ್ ತಾಲೂಕಿನ ಹೊಂಕಣದ ಶ್ರೀ ನಂಜುಂಡೇಶ್ವರ ಮಹಾಶಿವ ಯೋಗಿಗಳ ಪುಣ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಪುಟ್ಟರಾಜು ಕೊಡಿಹಳ್ಳಿ ಪ್ರಶಸ್ತಿ ಪ್ರದಾನ ಮಾಡಿದರು.

  300x250 AD

  ರಂಗಭೂಮಿ ಕಲಾವಿದರು, ಕವಿಗಳು, ಹಾಗೂ ನಿರ್ದೇಶಕರೂ ಆಗಿರುವ ಮಂಜುನಾಥ ನಾಯ್ಕ ಕಳೆದ 3 ದಶಕದಿಂದ ಕಲಾರಂಗದಲ್ಲಿ ಗುರುತಿಸಿಕೊಂಡು ಹತ್ತಾರು ನಾಟಕದಲ್ಲಿ ಖಳನಟರಾಗಿ ಅಭಿನಯಿಸಿದ್ದಾರೆ.ಜೊತೆಗೆ ಸಾಕಷ್ಟು ನಾಟಕಗಳಿಗೆ ನಿರ್ದೇಶನ ಮಾಡುವ ಮೂಲಕ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top