Slide
Slide
Slide
previous arrow
next arrow

ಹೊನ್ನಾವರದಲ್ಲಿ ಚಿರತೆ ಕಾಟ: ಜಾನುವಾರಗಳ ಬಲಿ

300x250 AD

ಹೊನ್ನಾವರ:ತಾಲೂಕಿನಲ್ಲಿ ಮತ್ತೆ ಚಿರತೆ ಕಾಟ ಪ್ರಾರಂಭವಾಗಿದ್ದು ಎರಡು ದಿನಗಳಲ್ಲಿ ಆರು ಜಾನುವಾರುಗಳನ್ನು ಚಿರತೆ ಬಲಿ ಪಡೆದಿದೆ.

ಕಳೆದೊಂದು ವಾರದಿಂದ ಸಾಲ್ಕೋಡು, ಕೊಂಡಕುಳಿ, ಕೆರೆಮನೆ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಚಿರತೆ ಗಣಪ ಗೌಡ ಹಾಗೂ ಬೆಳ್ಳಗೌಡರ ತಲಾ 1ಕರು, ಸುನೀಲ್ ಆಚಾರಿ ಹಾಗೂ ಬಾಬು ಹಳ್ಳೇರ್ ಅವರ ತಲಾ 2 ಜಾನುವಾರುವನ್ನು ಕೊಂದುಹಾಕಿದೆ. ಇನ್ನು ಜಾನುವಾರುಗಳನ್ನು ಬಲಿ ಪಡೆಯುವ ಮುನ್ನ ಮೊನ್ನೆಯಷ್ಟೇ ಎರಡು ಜಿಂಕೆಗಳನ್ನು ಕೊಂದಿದ್ದ ಚಿರತೆ ಮತ್ತೆ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತಿದ್ದು ಸ್ಥಳೀಯ ಜನರಲ್ಲಿ ಆತಂಕ ಎದುರಾಗಿದೆ.

300x250 AD

ಈ ಹಿಂದೆಯೋ ನಡೆದಿತ್ತು ಚಿರತೆ ದಾಳಿ ಈ ಹಿಂದೆ ಸಹ,ಸಾಲ್ಕೋಡು, ಕೊಂಡಕುಳಿ, ಕೆರೆಮನೆ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಜನ ವಾಸ್ತವ್ಯ ಪ್ರದೇಶಕ್ಕೆ ನುಗ್ಗಿದ ಚಿರತೆ ಗಣಪತಿ ಭಟ್ ಎಂಬುವವರ ಮನೆಯ ನಾಯಿಯ ಮೇಲೆ ದಾಳಿ ನಡೆಸಿತ್ತು. ಇದಲ್ಲದೇ ಹಸುಗಳ ಮೇಲೆ ಎರಗಿ ತಿಂದುಹಾಕಿತ್ತು. ಹೀಗಾಗಿ ಗ್ರಾಮದವರ ಆಗ್ರಹದ ಮೇಲೆ ಅರಣ್ಯ ಇಲಾಖೆ ಚಿರತೆ ಕಾರ್ಯಾಚರಣೆಗೆ ಇಳಿದಿದ್ದು ಬೋನ್ ಸಹ ಇಡಲಾಗಿತ್ತು. ಆದರೇ ಚಿರತೆ ಮಾತ್ರ ಸೆರೆ ಸಿಕ್ಕಿರಲಿಲ್ಲ. ಹೀಗಾಗಿ ಒಂದು ತಿಂಗಳ ನಂತರ ಚಿರತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೇ ಪುನಃ ಚಿರತೆ ದಾಳಿ ಇದೇ ಗ್ರಾಮದಲ್ಲಿ ಪ್ರಾರಂಭವಾಗಿದ್ದು ಕೃಷಿಕರು ತಮ್ಮ ರಾಸುಗಳನ್ನು ಕಳೆದುಕೊಳ್ಳುವಂತಾಗಿದ್ದು ಜನರ ಮೇಲೆ ಎರಗುವ ಭಯ ಇಲ್ಲಿನವರದ್ದಾಗಿದ್ದು ಕೂಡಲೇ ಚಿರತೆ ಸೆರೆ ಹಿಡಿದು ಬೇರೆಡೆ ಬಿಡಲು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top