• Slide
    Slide
    Slide
    previous arrow
    next arrow
  • ಆರ್.ವಿ.ಡಿ. ನಡೆ ಅತ್ತೆಯದನ್ನು ತೆಗೆದು ಅಳಿಯ ದಾನ ಮಾಡಿದಂತಿದೆ: ನಾಗರಾಜ ನಾಯಕ

    300x250 AD

    ಜೊಯಿಡಾ: ತಾಲೂಕಿನ ರಾಮನಗರ ಪುನರ್ವಸತಿ ಕೇಂದ್ರಕ್ಕೆ ಮೂಲಸೌಕರ್ಯ ವ್ಯವಸ್ಥೆ ಆಗಿರದಿದ್ದ ಸಂದರ್ಭದಲ್ಲೂ ಈ ಹಿಂದೆ ಮಂತ್ರಿಗಳಾಗಿದ್ದ ಆರ್.ವಿ. ದೇಶಪಾಂಡೆ ರಾಮನಗರಕ್ಕೆ ಎಲ್ಲಾ ಸೌಕರ್ಯ ಇದೆ ಎಂದು ಫೈಲ್ ಕ್ಲೋಸ್ ಮಾಡಿಸಿ ಸರ್ಕಾರಕ್ಕೆ ವರದಿ ನೀಡಿದ್ದರು.ಆದರೆ ರಾಮನಗರ ಮುಂತಾದ ಕಡೆ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಈ ಕುರಿತು ಕಳೆದ ಫೆಬ್ರವರಿಯಲ್ಲಿ ಜನರು ಸ್ಟ್ರೈಕ್ ಮಾಡಿದ್ದು, ಗೋಕರ್ಣಕ್ಕೆ ಅಂದಿನ ಸಚಿವ ಈಶ್ವರಪ್ಪ ಕಳೆದ ಏಪ್ರಿಲ್ 2022 ರಲ್ಲಿ ಬಂದಾಗ ಮಾಜಿ ಶಾಸಕ ಸುನಿಲ್ ಹೆಗಡೆ ಅರ್ಜಿ ನೀಡಿ ಇಳವೆ, ದಾಬೆ ಊರಿನಿಂದ ರಾಮನಗರ ಮತ್ತು ಸುತ್ತಮುತ್ತಲಿನ ಊರುಗಳಿಗೆ ನೀರು ನೀಡುವಂತೆ ಆಗ್ರಹಿಸಿದ್ದರು. ಆ ಪ್ರಕಾರ ಈಶ್ವರಪ್ಪನವರ ಮಾತಿನಂತೆ ಸರ್ವೇ ಮಾಡಿಸಿ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ‘ಬಹು ಗ್ರಾಮ ಕುಡಿಯುವ ನೀರಿನ ಯೋಜನೆ’ ಮಂಜೂರಿ ಮಾಡಿದ್ದರು. ಈ ಪ್ರಕಾರ ರಾಮನಗರ, ಅಸು ಮತ್ತು ಜಗಲಪೇಟ ಪಂಚಾಯತಗಳಿಗೆ 28 ಕೋಟಿ ರೂಪಾಯಿಯನ್ನು ಕುಡಿಯುವ ನೀರಿಗಾಗಿ ಮುಖ್ಯಮಂತ್ರಿಗಳು ಮಂಜೂರಿ ನೀಡಿದ್ದರು.

    ಆದರೆ ಇನ್ನೂ ಟೆಂಡರ್ ಕರೆಯದೇ ಇರುವಾಗಲೇ ದೇಶಪಾಂಡೆ ಭೂಮಿಪೂಜೆ ಇಟ್ಟುಕೊಂಡಿದ್ದು ಯಾರೋ ಮಾಡಿದ ಕೆಲಸವನ್ನು ತಾನು ಮಾಡಿದ್ದೇನೆ ಎಂದು ಬಿಂಬಿಸಿಕೊಳ್ಳಲು ಹೋಗುತ್ತಿರುವಂತೆ ಭಾಸವಾಗುತ್ತಿದೆ. ಭೂಮಿಪೂಜೆಗೆ ಯಾವುದೇ ಪ್ರೊಟೊಕಾಲ್ ಪಾಲನೆ ಮಾಡದೇ ಚುನಾವಣಾ ಗಿಮಿಕ್ ನಡೆಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಹೇಳಿದ್ದಾರೆ.

    300x250 AD

    ಅನೇಕ ವರ್ಷ ಮಂತ್ರಿಗಳಾಗಿದ್ದರೂ ಸಹ ನೀರಿಗಾಗಿ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಶ್ರಮಿಸದ ದೇಶಪಾಂಡೆ ಈಗ ಎಲ್ಲವೂ ತಾನೇ ಮಾಡಿದ್ದು ಎಂದು ಜನರನ್ನು ನಂಬಿಸಲು ಪ್ರಯಾಸ ಪಡುತ್ತಿದ್ದಾರೆ. ದೇಶಪಾಂಡೆಯವರ ನಡೆ ಹೇಗಿದೆಯೆಂದರೆ ಅತ್ತೆಯದನ್ನು ತೆಗೆದು ಅಳಿಯ ದಾನ ಮಾಡಿದಂತಿದೆ ಎಂದು ನಾಗರಾಜ ನಾಯಕ ವಿಶ್ಲೇಷಿಸಿದ್ದಾರೆ. ಆದರೆ ಈಗ ಜನರು ಚಾಣಾಕ್ಷರಿದ್ದು ದೇಶಪಾಂಡೆಯವರ ನಾಟಕ ಅರಿತಿದ್ದಾರೆ ಎಂದು ವಕ್ತಾರರು ನುಡಿದಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top