ಕಾರವಾರ: ಉಪ ಅರಣ್ಯ ಸಂರಕ್ಷಣಾಧಿಕಾರಿ ಯಲ್ಲಾಪುರ ವಿಭಾಗವು ಮಾಜಿ ಸೈನಿಕರಾದ ರವಿ ಭುಜಂಗ ಕಾನೇಟಕರ, ಶಿರಸಿ ತಾಲೂಕು ಬೆಕ್ಕೋಡ ಗ್ರಾಮದ ಸರ್ವೆ ನಂ. 14/ಬ ನೇದ್ದರಲ್ಲಿಯ 05,26,00 ಕ್ಷೇತ್ರವನ್ನು ಸಹಾಯಕ ಆಯುಕ್ತರು, ಉಪ ವಿಭಾಗ, ಶಿರಸಿ ರವರ ಶರತ್ತು ವಿಧಿಸಿ ಮಂಜೂರಿ ನೀಡಿದ್ದು ಇರುತ್ತದೆ. ಅದರಂತೆ, ಮಾಜಿ ಸೈನಿಕ ಸದರಿಯವರ ಜಮೀನಿನಲ್ಲಿರುವ ಗಿಡಮರಗಳು, ಸಾಗುವಳಿ ಮಾಡಲು ಆತಂಕವಾಗಿರುವುದರಿoದ ಇಲಾಖಾ ವತಿಯಿಂದ ತೆರವುಗೊಳಿಸಿಕೊಡಲು ವಿನಂತಿಸಿಕೊoಡಿರುವುದರಿoದ ಸದರ ಜಮೀನಿನ ಗಡಿಯೊಳಗೆ ನೆಲೆಸಿರುವ 257 ಗಿಡಮರಗಳು ಮಂಜೂರಿ ಪೂರ್ವದ ಗಿಡಮರಗಳಾಗಿದ್ದು, ಆ ಗಿಡಮರಗಳನ್ನು ಇಲಾಖಾ ವತಿಯಿಂದ ಕಟಾವಣೆ ಮಾಡಿ ಗಿಡಮರಗಳಿಂದ ತಯಾರಿಸಿದ ಮಾಲನ್ನು ಸರಕಾರಿ ಮರಮಟ್ಟು ಸಂಗ್ರಹಾಲಯ ಮುಂಡಗೋಡಕ್ಕೆ ರಫ್ತು ಪಡಿಸಲು ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976ರ ಸೆಕ್ಷನ್ 8ರ ಪ್ರಕಾರ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಬೇಕಾಗಿರುವುದರಿಂದ ಸದರಿ ಮರಗಳನ್ನು ತೆರವುಗೊಳಿಸಲು ಸಾರ್ವಜನಿಕರಿಂದ ಯಾವುದೇ ತಕರಾರು ಇದ್ದಲ್ಲಿ, ಅಧಿಸೂಚನೆ ಹೊರಡಿಸಿದ 15 ದಿವಸದೊಳಗೆ ವಲಯ ಅರಣ್ಯಾಧಿಕಾರಿ, ಕಾತೂರ ರವರ ಕಛೇರಿಯಲ್ಲಿ ಲಿಖಿತ ಹೇಳಿಕೆ ಸಲ್ಲಿಸುವಂತೆ ಉಪ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.