• Slide
    Slide
    Slide
    previous arrow
    next arrow
  • ಅಂಚೆ ಇಲಾಖೆಯ ರಾಷ್ಟ್ರೀಯ ಸ್ಪರ್ಧೆ: ಶಿರಸಿಯ ಸ್ವರ್ಣ ಪ್ರಭು ಪ್ರಥಮ

    300x250 AD

    ಶಿರಸಿ; ಅಂಚೆ ಇಲಾಖೆ ನಡೆಸುವ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಡಾನ್ ಬಾಸ್ಕೋ ಪ್ರೌಢಶಾಲೆಯಲ್ಲಿ ಓದುತ್ತಿರುವ ಎಂಟನೇ ತರಗತಿಯ ವಿದ್ಯಾರ್ಥಿನಿ ಸ್ವರ್ಣ ಪ್ರಭು ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.

    ಪ್ರತಿ ವರ್ಷ ಅಂಚೆ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧಾ ಕಾರ್ಯಕ್ರಮವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಹಮ್ಮಿಕೊಳ್ಳುತ್ತಿದ್ದು , ಈ ಬಾರಿ ಗೋವಾದ ಪಣಜಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ಗಾಯನಕ್ಕೆ ಪ್ರಥಮ ಸ್ಥಾನ ಹಾಗೂ ಭರತನಾಟ್ಯದಲ್ಲಿ ತೃತೀಯ ಸ್ಥಾನ ಪಡೆದು ಸ್ವರ್ಣ ಪ್ರಭು ಊರಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದು ಶಾಲಾ ಕಮಿಟಿಯವರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. ಸ್ವರ್ಣ ಪ್ರಭು ನ್ಯಾಯಾಂಗ ಇಲಾಖೆಯ ದೇವಪ್ಪ ಪ್ರಭು ಹಾಗೂ ಅಂಚೆ ಇಲಾಖೆಯ ಸಾವಿತ್ರಿ ಪ್ರಭು ಅವರ ಪುತ್ರಿಯಾಗಿದ್ದಾಳೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top