Slide
Slide
Slide
previous arrow
next arrow

ಅಪರಿಚಿತ ವಾಹನ ಬಡಿದು ಚಿರತೆ ಸಾವು

300x250 AD

ಅಂಕೋಲಾ: ಅಪರಿಚಿತ ವಾಹನ ಬಡಿದ ಪರಿಣಾಮವಾಗಿ ಚಿರತೆಯೊಂದು ಸಾವು ಕಂಡ ಘಟನೆ ತಾಲೂಕಿನ ಶಿರೂರು ಕೋಡಸಣಿ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಒಂದೂವರೆ ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಅಪಘಾತಪಡಿಸಿದ ವಾಹನ ಯಾವುದೆಂದು ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಅಂಕೋಲಾ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ, ವಲಯ ಅರಣ್ಯಾಧಿಕಾರಿ ಜಿ.ವಿ.ನಾಯಕ, ಉಪವಲಯ ಅರಣ್ಯಾಧಿಕಾರಿ ರಾಮಕೃಷ್ಣ ನಾಯ್ಕ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆಯ ಕಳೆಬರಹವನ್ನು ಪಶು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಅಧಿಕಾರಿಗಳ ಪರವಾನಗಿ ಪಡೆದು ಚಿರತೆ ಕಳೆಬರಹದ ಅಂತ್ಯಕ್ರಿಯೆ ನಡೆಸಲಾಯಿತು.

300x250 AD
Share This
300x250 AD
300x250 AD
300x250 AD
Back to top