Slide
Slide
Slide
previous arrow
next arrow

ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ: ಶಿಕ್ಷಕಿ ಸೀಮಾ ಮಡಿವಾಳ ಪ್ರಥಮ

300x250 AD

ಸಿದ್ದಾಪುರ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ ವಿಶ್ವವಿದ್ಯಾಲಯ ಗದಗದಲ್ಲಿ ನಡೆದ ಸ್ವರಾಜ್ಯ ‘ಅಂತರಾಷ್ಟ್ರೀಯ ಸಮ್ಮೇಳನ 2023’ರಲ್ಲಿ ತಾಲೂಕಿನ ಸಹಿಪ್ರಾ ಶಾಲೆ ಗಿರಗಡ್ಡೆಯ ಸಹ ಶಿಕ್ಷಕಿ ಸೀಮಾ ಮಡಿವಾಳರವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಯಸ್ಸಿನ ಮಿತಿಯಿಲ್ಲದೇ ಯಾರು ಬೇಕಾದರೂ ಭಾಗವಹಿಸಬಹುದಾದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು  ಪ್ರಥಮ ಸ್ಥಾನ ಪಡೆದಿದ್ದು ಅವಕಾಶವಿದ್ದ 3 ವಿಷಯಗಳಾದ ಧರ್ಮ,ಸ್ವರಾಜ್ಯ ಹಾಗೂ ಸ್ವಾಸ್ಥ್ಯ ಗಳಲ್ಲಿ “ಧರ್ಮ”ವಿಷಯದ ಕುರಿತು ಪ್ರಬಂಧ ಬರೆದಿದ್ದು, 25,000 ಬಹುಮಾನವನ್ನು ಕುಲಪತಿಗಳಾದ ವಿಷ್ಣುಕಾಂತ  ಚಟಪಲ್ಲಿರವರಿಂದ ಪಡೆದು ನಮ್ಮ ಜಿಲ್ಲೆ,ತಾಲೂಕಿನ ಶಿಕ್ಷಕರ ಗೌರವ ಹೆಚ್ಚಿಸಿ ಐತಿಹಾಸಿಕ ಸಾಧನೆ ಮಾಡಿರುತ್ತಾರೆ.
ಈ ಸಮ್ಮೇಳನದಲ್ಲಿ ವಿವಿಧ ಹತ್ತು ದೇಶಗಳ ಹಾಗೂ ನಮ್ಮ ದೇಶದ  ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ಇವರ ಸಾಧನೆಗೆ ತಾಲೂಕಾ ಶಿಕ್ಷಕರ  ಸಂಘದ ಅಧ್ಯಕ್ಷರಾದ ಸತೀಶ ಹೆಗಡೆ,ಪ್ರಧಾನ ಕಾರ್ಯದರ್ಶಿ ಗುರುರಾಜ ನಾಯ್ಕ ಹಾಗೂ ಸಮಸ್ತ ಶಿಕ್ಷಕರು ಇನ್ನೂ ಹೆಚ್ಚಿನ ಸಾಧನೆ ತಮ್ಮಿಂದಾಗಲೆಂದು ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top