Slide
Slide
Slide
previous arrow
next arrow

ಮಾ.1ಕ್ಕೆ ಬೇಡಜಂಗಮ ಜಿಲ್ಲಾ ಸಮಾವೇಶ

300x250 AD

ದಾಂಡೇಲಿ: ಜಿಲ್ಲಾ ಬೇಡಜಂಗಮ ಒಕ್ಕೂಟದ ಆಶ್ರಯದಲ್ಲಿ ಮಾ.01ರಂದು ಬೆಳಿಗ್ಗೆ 11 ಗಂಟೆಗೆ ಮುಂಡಗೋಡದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಬೇಡಜಂಗಮ ಸಮಾಜದ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ತಾಲೂಕಿನ ಬೇಡಜಂಗಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ತಾಲ್ಲೂಕಿನ ಬೇಡಜಂಗಮ ಸಮಾಜದ ಅಧ್ಯಕ್ಷ ಚೇತನ್‌ಕುಮಾರಮಠ, ಪ್ರಮುಖರಾದ ಗುರು ಮಠಪತಿ ಮತ್ತು ಸಮಾಜದ ಜಿಲ್ಲಾ ಕಾರ್ಯದರ್ಶಿ ಶಂಕರಯ್ಯಾ ಕೆ.ಹಿರೇಮಠ ಮನವಿ ಮಾಡಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜದ ಬಹುಮುಖ್ಯ ಬೇಡಿಕೆ ಈಡೇರಿಕಾಗಿ ಹಮ್ಮಿಕೊಂಡಿರುವ ಹೋರಾಟದ ಮುಂದಿನ ನಡೆ, ಸಮಾಜ ಬಾಂಧವರನ್ನು ಒಗ್ಗೂಡಿಸುವಿಕೆ, ಸಮಾಜ ಬಾಂಧವರ ಬಗ್ಗೆ ಅಂಕಿ ಅಂಶಗಳ ಸಂಗ್ರಹ, ಸಮಾಜ ಬಾಂಧವರ ಮಕ್ಕಳ ಶಿಕ್ಷಣಕ್ಕೆ ಉಪಯುಕ್ತ ಕಾರ‍್ಯಯೋಜನೆಗಳನ್ನು ಪ್ರಧಾನವಾಗಿಸಿಕೊಂಡು ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬೇಡಜಂಗಮ ಸಮಾಜದ ಪ್ರಮುಖರುಗಳಾದ ಡಾ.ಶೇಖರ್ ಹಂಚಿನಾಳಮಠ, ಜಿ.ಎಸ್.ಅಣ್ಣಿಗೇರಿ, ಪ್ರದೀಪ್ ಜಿ. ದೇವರಮಠ, ವೀರಯ್ಯಾ ಹೊಸಮಠ, ಮಹಾಬಲೇಶ್ವರಯ್ಯ ಎಂ. ಹಿರೇಮಠ, ಪಂಚಾಕ್ಷರಿಸ್ವಾಮಿ ಕನಕೇರಿಮಠ, ಶರಣಯ್ಯಾ ಹಿರೇಮಠ, ಬಸಯ್ಯಾ ನಾಗಶೆಟ್ಟಿಕೊಪ್ಪ, ಅಂದಾನಯ್ಯ.ಎಸ್.ಅಣಿಗೇರಿ ಮೊದಲಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top