Slide
Slide
Slide
previous arrow
next arrow

ವನದುರ್ಗಾಪರಮೇಶ್ವರಿ ಪುನರ್ ಪ್ರತಿಷ್ಠಾ ಮಹೋತ್ಸವ

300x250 AD

ಹೊನ್ನಾವರ: ತಾಲೂಕಿನ ಮಂಕಿ ಗಂಜಗೇರಿಯಲ್ಲಿ ಹಸಿರು ವನಸಿರಿಯ ನಡುವೆ ಬಹುಕಾಲದಿಂದಲು ನೆಲೆ ನಿಂತ, ಗ್ರಾಮಸ್ಥರ ಆರಾಧ್ಯ ದೇವಿ ಶ್ರೀವನದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಸುಸಜ್ಜಿತ ಶಿಲಾಮಯ ದೇವಾಲಯದ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಫೆ.22ರಿಂದ ಆರಂಭವಾಗಿದ್ದು, ಎರಡನೇ ದಿನದ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಚಾಲನೆ ನೀಡಿದರು. 
ದೇವಾಲಯಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಚಿತ್ತಾರ ಕ್ರಾಸನಿಂದ ಬೈಕ್ ರ‍್ಯಾಲಿ ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿ ಇಲ್ಲದೇ ಪೂಜೆ ಭಗವಂತನಿಗೆ ಸಲ್ಲುವುದಿಲ್ಲ. ಧಾರ್ಮಿಕ ಆಚರಣೆಯಿಂದ ಗ್ರಾಮದಲ್ಲಿ ನೆಮ್ಮದಿ ಜೊತೆಗೆ ಎಲ್ಲರಲ್ಲೂ ಪ್ರೀತಿ ವಿಶ್ವಾಸ ಮೂಡಲಿದೆ. ಸಂಸ್ಕಾರಯುತ ಜೀವನ ನಡೆಸಲು ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ದೇವಸ್ಥಾನಗಳು ಜಿರ್ಣೊದ್ದಾರಗೊಂಡರೆ ಆ ಗ್ರಾಮದಲ್ಲಿ ಮಾನಸಿಕವಾಗಿ ನೆಮ್ಮದಿ ಇರಲಿದೆ. ಗ್ರಾಮಸ್ಥರು ಒಗ್ಗಟ್ಟಾಗಿ ಪ್ರತಿ ಬಾರಿಯೂ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ, ಗ್ರಾಮಸ್ಥರು ತಮ್ಮ ಆದಾಯದ ಕೆಲವು  ಭಾಗವನ್ನು ಸಂಗ್ರಹಿಸಿ ಕೋಟಿಗೂ ಅಧಿಕ ವೆಚ್ಚ ವಿನಿಯೋಗಿಸಿ ದೇವಸ್ಥಾನ ನಿರ್ಮಾಣ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಯಾವ ಗ್ರಾಮದಲ್ಲಿ ದೇವಸ್ಥಾನ ಮತ್ತು ಶಾಲೆ ಅಭಿವೃದ್ದಿ ಆಯಿತೋ ಆ ಗ್ರಾಮ ಮಾದರಿ ಗ್ರಾಮವಾಗಲಿದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಟ್ಟಡಕ್ಕೆ ಧನ ಸಹಾಯಮಾಡಿದವರನ್ನು, ಕಟ್ಟಡ ಇನ್ನಿತರ ಕೆಲಸ ಮಾಡಿದವರನ್ನು, ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಜಿ.ಪಂ. ಸದಸ್ಯ ಕೃಷ್ಣ ಗೌಡ, ಪ್ರಮುಖರಾದ ಚಂದ್ರಶೇಖರ ಗೌಡ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಗಂಜಗೇರಿ ಮತ್ತು ತಟ್ಟಿಮೂಲೆ ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top