Slide
Slide
Slide
previous arrow
next arrow

ಮುಳುಗುತ್ತಿದ್ದ ಬೋಟ್’ನಿಂದ ನಾಲ್ವರು ಮೀನುಗಾರರ ರಕ್ಷಣೆ

300x250 AD

ಹೊನ್ನಾವರ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವಘಡಕ್ಕೆ ತುತ್ತಾಗಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ತಾಲೂಕಿನ ಅರಬ್ಬಿ ಸಮುದ್ರ ವ್ಯಾಪ್ತಿಯ 30 ನಾಟಿಕಲ್ ಮೈಲು ದೂರದಲ್ಲಿ ಜೈಭಾರತ್ ಹೆಸರಿನ ಆಳಸಮುದ್ರ ಮೀನುಗಾರಿಕಾ ಬೋಟು ಮುಳುಗುವ ಹಂತದಲ್ಲಿತ್ತು. ಈ ವೇಳೆ ರಕ್ಷಣೆಗಾಗಿ ಇತರೆ ಬೋಟುಗಳಿಗೆ ಸಂದೇಶ ರವಾನಿಸಿದ್ದರು. ಆಗ ಲಲಿತ್ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ರಕ್ಷಣೆಗೆ ಧಾವಿಸಲಾಗಿದ್ದು, ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಯಿತು.ಮುಳುಗುತ್ತಿದ್ದ ಮೀನುಗಾರಿಕಾ ಬೋಟನ್ನು ಲಲಿತ್ ಬೋಟಿಗೆ ಕಟ್ಟಿ ಹೊನ್ನಾವರದ ಕಾಸರಕೋಡು ಬಂದರಿಗೆ ತರಲಾಗಿದೆ.

ಹೂಳಿನ ಸಮಸ್ಯೆಯೇ ಕಾರಣ ಎಂದು ಆರೋಪ

300x250 AD

ಕಾಸರಕೋಡು ಬಂದರು ಪ್ರದೇಶದಲ್ಲಿ ಸಾಕಷ್ಟು ವರ್ಷಗಳಿಂದ ಹೂಳು ತುಂಬಿಕೊಂಡಿದ್ದು, ಮೀನುಗಾರಿಕೆ ನಡೆಸಿಕೊಂಡು ಬೋಟುಗಳು ಬಂದರಿಗೆ ವಾಪಸ್ಸಾಗಲು ಪರದಾಡುವಂತಾಗಿದೆ. ಹೂಳಿನ ಕಾರಣದಿಂದಲೇ ಈ ಬೋಟು ಕೂಡಾ ಮುಳುಗಿದ್ದು ಎಂದು ಮೀನುಗಾರರು ಆಕ್ಷೇಪಿಸಿದ್ದಾರೆ.

ಈಗಾಗಲೇ ಹಲವಾರು ಬೋಟುಗಳು ಅವಘಡಕ್ಕೆ ತುತ್ತಾಗುತ್ತಿದ್ದು, ಜನಪ್ರತಿನಿಧಿಗಳ ಬಳಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗುತಿಲ್ಲ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top