Slide
Slide
Slide
previous arrow
next arrow

ಚುನಾವಣೆ ಬಹಿಷ್ಕರಿಸಿದ ಶ್ರೀನಿವಾಸ ಜಡ್ಡಿ ಜನತೆ

300x250 AD

ಕಾನಸೂರು: ಇಲ್ಲಿನ ಶ್ರೀನಿವಾಸ ಜಡ್ಡಿಯ ಜನತೆ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿರಷ್ಕರಿಸುವುದರ ಮೂಲಕ ತಮ್ಮ ಹೋರಾಟವನ್ನು ಪ್ರಾರಂಭಿಸಿದ್ದಾರೆ.
ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೃಹತ್ ನಾಮಫಲಕವನ್ನು ಹಾಕಿದ್ದು, ನಾಮಫಲಕದಲ್ಲಿ “ರಾಜಕಾರಣಿಗಳೇ ನಿಮಗೆ ನಮ್ಮ ಊರಿಗೆ ಪ್ರವೇಶವಿಲ್ಲ. ನಾವು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ” ಎಂಬುದನ್ನು ಹಾಕಿರುವುದರಿಂದ ವಿಷಯ ತಿಳಿದ ತಾಲೂಕಾ ಆಡಳಿತ ರಾತ್ರಿ ವೇಳೆಯಲ್ಲಿ ಊರಿಗೆ ಆಗಮಿಸಿ ಜನರೊಂದಿಗೆ ಚರ್ಚೆ ನಡೆಸಿತು. ಸಿದ್ದಾಪುರದ ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ, ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ದಿಲೀಪ, ತಾ.ಪಂ. ಕಾರ್ಯನಿರ್ವಾಹಕ ಪ್ರಶಾಂತ ರಾವ್ ಹಾಗು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗು ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಒಂದು ವಾರದಲ್ಲಿ ನಿಮಗೆ ಸಮಸ್ಯೆಯನ್ನು ಬಗೆಹರಿಸಿಕೊಡುವ ತಾತ್ಕಾಲಿಕ ಭರವಸೆಯನ್ನು ನೀಡಿದರೂ ಸಹ ಊರ ನಾಗರಿಕರು ಭರವಸೆಯನ್ನು ನೀಡಿ ರಸ್ತೆಯಲ್ಲಿ ಹಾಕಿರುವ ನಾಮಫಲಕವನ್ನು ತೆಗೆಯುವಂತೆ ವಿನಂತಿಸಿದರೆ, ಊರ ನಾಗರಿಕರು ಯಾವುದೇ ಕಾರಣಕ್ಕೂ ನಿಮ್ಮ ಭರವಸೆಯನ್ನು ನಾವು ನಂಬುವುದಿಲ್ಲ. ನೀವು ಕಾಮಗಾರಿಯನ್ನು ಪ್ರಾರಂಭಿಸಿ. ಅಲ್ಲಿಯವರೆಗೆ ನಾವು ಹೋರಾಟವನ್ನು ನಡೆಸಿ, ಯಾವುದೇ ಕಾರಣಕಕ್ಕೂ ನಾಮಫಲಕವನ್ನು ತೆಗೆಯುವುದಿಲ್ಲ ಎಂದು ಪಟ್ಟನ್ನು ಹಿಡಿದಿದ್ದು, ತಹಶೀಲ್ದಾರ ಮಂಜುನಾಥ ಈ ಕುರಿತು ನಾವು ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚೆ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ದಿಲೀಪ ಮಾತನಾಡಿ, ಒಂದು ವಾರದಲ್ಲಿ ಇಲ್ಲಿರುವ ಕುಟುಂಬಗಳಿಗೆ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಊರ ನಾಗರಿಕರು, ಮಹಿಳೆಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top