ಶಿರಸಿ: ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ ನಲ್ಲಿ ಮಾರ್ಚ್ 25 ಮತ್ತು 26 ಕ್ಕೆ ನಡೆಯಲಿರುವ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಇಲ್ಲಿನ ನಿವೃತ್ತ ಪ್ರಾಧ್ಯಾಪಕ, ಕವಿ ಪ್ರೋ. ಧರಣೇಂದ್ರ ಕುರಕುರಿ ಆಯ್ಕೆ ಆಗಿದ್ದಾರೆ.
ಮೂಲತಃ ಧಾರವಾಡ ತಾಲೂಕು ಮುಗದ ಗ್ರಾಮದ ಕುರಕುರಿ ಶಿರಸಿಯಲ್ಲಿ ಕಳೆದ ಮೂರುವರೆ ದಶಕಗಳಿಗೂ ಅಧಿಕ ಕಾಲದಿಂದ ಶಿರಸಿಯಲ್ಲಿ ವಾಸವಾಗಿದ್ದಾರೆ.
ಪ್ರೊ ಧರಣೇಂದ್ರ ಕುರಕುರಿ 7 ಗ್ರಂಥಗಳನ್ನು ಪ್ರಕಟಿಸಿ, 7 ಗ್ರಂಥಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದು ಕನ್ನಡದಿಂದ ಹಿಂದಿ ಭಾಷೆಗೆ 17 ಗ್ರಂಥಗಳನ್ನು ಅನುವಾದ ಮಾಡಿದ್ದಾರೆ. ಹಿರಿಯ ಸಾಹಿತಿಗಳಾದ ಕುರಕುರಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ 17 ಪ್ರಶಸ್ತಿ ಪಡೆದಿದ್ದಾರೆ
ಪ್ರಾಧ್ಯಾಪಕ, ಖ್ಯಾತ ಹಿರಿಯ ಕವಿ, ಸಾಹಿತಿ, ಬರಹಗಾರ, ಅನುವಾದಕ, ವಿಮರ್ಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು 82 ರ ಹರೆಯದಲ್ಲೂ ಅತ್ಯಂತ ಕ್ರೀಯಾಶೀಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಸಾಹಿತ್ಯ ಲೋಕಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಹಿರಿಯ ಚೇತನ. ಕನ್ನಡ ಮತ್ತು ಹಿಂದಿ ಭಾಷೆಯ ಶ್ರೇಷ್ಠ ಕೃತಿಗಳನ್ನು ಅನುವಾದಿಸುವ ಮೂಲಕ ಎರಡೂ ಭಾಷೆಯ ಸಾಹಿತ್ಯದ ಸಂಪರ್ಕ ಕೊಂಡಿಯಾಗಿದ್ದಾರೆ ಎಂಬುದು ಉಲ್ಲೇಖನೀಯ.