ಕಾರವಾರ: ಅಸ್ನೋಟಿ ಗ್ರಾಮ ಪಂಚಾಯತ್, ಪತಂಜಲಿ ಯೋಗ ಸಮಿತಿ, ಅಮದಳ್ಳಿ ಪ್ರೇಮಾಶ್ರಮ ಚ್ಯಾರಿಟೇಬಲ್ ಟ್ರಸ್ಟ್, ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಕಲ್ಲೂರ ಎಜುಕೇಶನ್ ಟ್ರಸ್ಟ್ ಹಾಗೂ ಸದಾಶಿವಗಡ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಅಸ್ನೋಟಿ ಶಿವಾಜಿ ವಿದ್ಯಾಮಂದಿರದಲ್ಲಿ ಶಿವರಾತ್ರಿ ದಿನದಂದು ಹಮ್ಮಿಕೊಂಡ ಯೋಗ ಶಿಬಿರದಲ್ಲಿ ಯೋಗ ಗುರು ವೆಂಕಟೇಶಜೀ ಅವರಿಗೆ ಸನ್ಮಾನಿಸಲಾಯಿತು.
ಸನ್ಮಾನ ಮಾಡಿ ಮಾತನಾಡಿದ ಕಲ್ಲೂರ ಎಜ್ಯುಕೇಶನ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರ, ಆರೋಗ್ಯ ಮತ್ತು ದೀರ್ಘ ಆಯುಷ್ಯ ಪಡೆಯಲು ಯೋಗ ಅಗತ್ಯವಾಗಿದೆ. ಸಾಧಕರೆಲ್ಲರೂ ತಮ್ಮ ಜೀವನದಲ್ಲಿ ಯೋಗಾಸನಗಳನ್ನು ಅಳವಡಿಸಿಕೊಂಡು ಸಂಯಮತೆಯನ್ನು ಪಡೆದಿರುತ್ತಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪತಂಜಲಿ ಯೋಗ ಸಮಿತಿಯ ಯೋಗ ಗುರು ವೆಂಕಟೇಶ ಜೀ, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಯೋಗಾಸನವನ್ನು ಮಾಡಬೇಕು. ನನ್ನ ಬಳಿ ಯೋಗ ತರಬೇತಿ ಪಡೆದ ಕಾರವಾರ ಮತ್ತು ಹುಬ್ಬಳ್ಳಿಯ ವಿದ್ಯಾರ್ಥಿಗಳು ಬಹಳಷ್ಟು ಸಾಧನೆ ಮಾಡಿದ್ದಾರೆ. ನಿಮಗೂ ಯೋಗದ ಪರಿಚಯವಾಗಬೇಕೆಂದು ನಿಮ್ಮ ಶಿಕ್ಷಕರಾದ ಗಣೇಶ ಬಿಷ್ಣಣ್ಣನವರ ನನ್ನನ್ನು ಆಹ್ವಾನಿಸಿ ಈ ಶಿಬಿರ ಆಯೋಜನೆಗೊಳ್ಳಲು ಕಾರಣೀಭೂತರಾಗಿದ್ದಾರೆ. ಮುಂದೆಯೂ ನಿಮಗೆ ಮಾರ್ಗದರ್ಶನ ನೀಡುತ್ತೇನೆಂದು ಮಾರ್ಮಿಕವಾಗಿ ನುಡಿದರು.
ನಗರಸಭೆಯ ಮಾಜಿ ಸದಸ್ಯ ದೇವಿದಾಸ ನಾಯ್ಕ, ನಾವುಗಳು ಮಾನಸಿಕವಾಗಿ ಸ್ವಾಸ್ಥವಾಗಿರಲು ದಿನಂಪ್ರತಿ ಯೋಗಾಸನಗಳನ್ನು ರೂಢಿಸಿಕೊಳ್ಳಬೇಕು. ನಾನು ದಿನಪತ್ರಿಕೆಯಲ್ಲಿ ಬರುತ್ತಿದ್ದ ಯೋಗದ ಆಸನಗಳನ್ನು ನೋಡಿ ಕಲಿತು ಅದರ ಮೂಲಕ ನನ್ನಲ್ಲಿ ಉಂಟಾಗಿದ್ದ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಿ ಮಾನಸಿಕವಾಗಿ ಸದೃಢನಾಗಿ ಮತ್ತೆ ಸಮಾಜಮುಖಿ ಕಾರ್ಯಗಳನ್ನು ಮಾಡಲು ಅಣಿಯಾದೆ ಎಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಪಕ ದಿನೇಶ ಗಾಂವಕರ ವಹಿಸಿ, ಶಿವರಾತ್ರಿ ದಿನದಂದು ಉತ್ತಮ ಕಾರ್ಯವಾಗಿದ್ದು ಶ್ಲಾಘನೀಯ. ಅದು ಹೀಗೆಯೇ ಮುಂದುವರಿಯಲೆAದು ಆಶಿಸಿ ಕೃತಜ್ಞತೆ ಅರ್ಪಿಸಿದರು. ರಕ್ಷಿತಾ ಮಿರಾಶಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊAಡ ಕಾರ್ಯಕ್ರಮದಲ್ಲಿ ಸಂಘಟಕ ಗಣೇಶ ಬಿಷ್ಠಣ್ಣನವರ ಸ್ವಾಗತಿಸಿ ನಿರೂಪಿಸಿದರು.
ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಯೋಗಾಸನ ಅವಶ್ಯ: ಯೋಗಗುರು ವೆಂಕಟೇಶಜೀ
