Slide
Slide
Slide
previous arrow
next arrow

ಮೀಸಲು ಅನುದಾನದ ಸಮಸ್ಯೆ ಬಗೆಹರಿಸಿ: ನಾರಾಯಣ ಮಡಿವಾಳ

300x250 AD

ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರಿಶಿಷ್ಠ ಜಾತಿಯ ಜನಾಂಗದವರು ಇಲ್ಲದಿದ್ದರೂ 2015-16ರಿಂದ ಪರಿಶಿಷ್ಠ ಜಾತಿಯವರಿಗಾಗಿ ಮೀಸಲಾಗಿಟ್ಟ ಅನುದಾನ ಪಂಚಾಯತ್ ಖಾತೆಯಲ್ಲಿದ್ದು, ಈ ಕಾರಣದಿಂದ ಇನ್ನುಳಿದ ಅನುದಾನ ಬರಲು ವಿಳಂಬವಾಗುತ್ತಿದೆ. ಈ ಪರಿಶಿಷ್ಠ ಜಾತಿಗೆ ಮೀಸಲಿಟ್ಟ ಅನುದಾನವನ್ನು ಇತರೇ ವರ್ಗದವರಿದ್ದಲ್ಲಿ ಬಳಸಲು ಅನುವು ಮಾಡಿಕೊಡಿ. ಇಲ್ಲವಾದಲ್ಲಿ ಮರಳಿಯಾದರೂ ಪಡೆಯಿರಿ ಎಂದು ಬೆಳಂಬಾರ ಗ್ರಾ.ಪಂ. ಅಧ್ಯಕ್ಷ ನಾರಾಯಣ ಮಡಿವಾಳ ಹೇಳಿದರು.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಜನಸಂಖ್ಯೆ ಜಾಸ್ತಿ ಇದೆ. ಆದರೆ ಪರಿಶಿಷ್ಠ ಜಾತಿಯ ಜನರು ಮತ್ತು ಮನೆಗಳು ಇಲ್ಲ. ಬೆಳಂಬಾರ ಗ್ರಾ.ಪಂನಲ್ಲಿ 14ನೇ ಹಣಕಾಸು ಯೋಜನೆಯ ಒಟ್ಟೂ ಅನುದಾನದಲ್ಲಿ ಶೇ25ರಷ್ಟು ಪರಿಶಿಷ್ಟ ಜಾತಿಯ ಮೀಸಲು ಅನುದಾನವು 2015-16ನೇ ಸಾಲಿನಿಂದ 2019-20ನೇ ಸಾಲಿನವರೆಗೆ ರೂ.21,67128 ಅನುದಾನ ಬಳಕೆ ಮಾಡಲಾಗದೆ ಹಾಗೆಯೇ ಉಳಿದಿದೆ. 15 ನೇ ಹಣಕಾಸು ಯೋಜನೆಯ 2020-21ನೇ ಸಾಲಿನಿಂದ 2022-23ನೇ ಸಾಲಿನವರೆಗೆ ರೂ.22,08971 ಬಳಕೆಯಾಗದೆ ಉಳಿದಿದೆ. ಒಟ್ಟೂ 43,76099 ಲಕ್ಷ ಅನುದಾನ ತಾಂತ್ರಿಕ ದೋಷಗಳಿಂದ ಬಾಕಿ ಉಳಿದಿದ್ದು, ಈ ಅನುದಾನ ಬಳಕೆಗೆ ಅವಕಾಶ ನೀಡಿ ಎನ್ನುವುದು ಬೆಳಂಬಾರ ಗ್ರಾ.ಪಂ. ಆಡಳಿತ ಮಂಡಳಿಯವರ ಆಗ್ರಹವಾಗಿದೆ. ನಿಯಮದ ಪ್ರಕಾರ ಈ ಅನುದಾನವನ್ನು ಬೇರೆ ಅಭಿವೃದ್ಧಿಗಾಗಿ ಬಳಕೆ ಮಾಡುವುದು ಸಾಧ್ಯವಿಲ್ಲ. ಹಲವಾರು ಬಾರಿ ಗ್ರಾ.ಪಂ. ವ್ಯಾಪ್ತಿಯ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಈ ಅನುದಾನವನ್ನು ನೀಡಿ ಎಂದು ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಈ ಹಣವನ್ನು ಬಳಕೆ ಮಾಡಲು ನೀಡಿ ಅಥವಾ ಸರಕಾರದ ಬೊಕ್ಕಸಕ್ಕೆ ಮರಳಿಯಾದರೂ ಪಡೆಯಿರಿ ಎಂದು ಹೇಳಿದರು. ಒಂದು ವೇಳೆ ಅಧಿಕಾರಿಗಳು ಸ್ಪಂಧಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದರು.
ಕಸ ವಿಲೇವಾರಿ ಘಟಕ ನಿರ್ಮಿಸಲು ರಸ್ತೆ ನಿರ್ಮಾಣದ ಸಮಸ್ಯೆ: ಗ್ರಾ.ಪಂ. ಸದಸ್ಯ ವೆಂಕಟೇಶ ಗೌಡ ಮಾತನಾಡಿ, ನಮ್ಮ ಪಂಚಾಯತ್ ಅಭಿವೃದ್ಧಿ ಮಾಡುವ ಕನಸು ಪ್ರತಿಯೊಬ್ಬ ಸದಸ್ಯರದಾಗಿದೆ. ಅಧ್ಯಕ್ಷ/ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು ಸೌಕರ್ಯಗಳನ್ನು ಸಾರ್ವಜನಿಕರಿಗೆ ನೀಡಬೇಕೆಂದು ಶ್ರಮಿಸುತ್ತಿದ್ದೇವೆ. ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕವಿಲ್ಲದೇ ಓರ್ವ ದಾನಿಗಳು ನೀಡಿದ 2 ಗುಂಟೆ ಸ್ಥಳದಲ್ಲಿ ಕಸವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲು ಹೊರಟಿದ್ದೆವು. ಆದರೆ ಈ ಕಸವಿಲೇವಾರಿ ಘಟಕಕ್ಕೆ ತೆರಳಲು ಅರಣ್ಯ ಇಲಾಖೆಯವರು ರಸ್ತೆಗೆ ಅವಕಾಶ ನೀಡುತ್ತಿಲ್ಲ. ಈ ರಸ್ತೆ ನಿರ್ಮಾಣಗೊಂಡಲ್ಲಿ ಹಾಲಕ್ಕಿ ಸಮಾಜದ ಸ್ಮಶಾನಕ್ಕೆ ತೆರಳಲು ಅನುಕೂಲವಾಗುತ್ತಿದ್ದು, ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ನಮ್ಮ ನಾಗರಿಕರ ಸಮಸ್ಯೆಗೆ ಸ್ಪಂದಿಸಿ ಅವಕಾಶ ಕಲ್ಪಿಸಬೇಕು ಎಂದರು.
ಗ್ರಾ.ಪಂ. ಸದಸ್ಯ ಮಂಜುನಾಥ ನಾಯ್ಕ ಮಾತನಾಡಿ, ನಮ್ಮ ಪಂಚಾಯತ್ ಅಭಿವೃದ್ಧಿಯಾಗಬೇಕಾದರೆ ಹಲವು ಸಮಸ್ಯೆಗಳಿದ್ದು, ಈ ತಾಂತ್ರಿಕ ದೋಷಗಳನ್ನು ಅಧಿಕಾರಿಗಳು ತಕ್ಷಣ ಬಗೆಹರಿಸಿ ಸಹಕರಿಸಬೇಕು ಎಂದರು. ಗ್ರಾ.ಪಂ. ಸದಸ್ಯೆ ಬೇಬಿ ಗೌಡ ಮಾತನಾಡಿ, 2018ರಲ್ಲಿ ನಮ್ಮ ಪಂಚಾಯತ್‌ಗೆ 20ಮನೆಗಳು ಮಂಜೂರಾಗಿದ್ದವು. ಆದರೆ ಕೆಲವು ತೊಂದರೆಗಳಿಂದ ಮತ್ತು ಸರಕಾರದಿಂದ ಹಣ ಬರುವುದು ವಿಳಂಬ ಆಗಿರುವುದರಿಂದ ಕೆಲವರು ಮನೆಯನ್ನು ಅರ್ಧಮರ್ಧ ಮುಗಿಸಿಕೊಂಡಿದ್ದು, ಕೇವಲ 10 ಜನರಿಗೆ ಮಾತ್ರ ಬಿಲ್ ಪಾವತಿಯಾಗಿದೆ. ಇನ್ನುಳಿದ 10 ಮನೆಗಳ ಬಿಲ್ ಪಾವತಿಯಾಗುವುದಾದರೆ 3 ಹಂತದ ಛಾಯ ಚಿತ್ರಗಳನ್ನು ಪುನಃ ನೀಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಫಲಾನುಭವಿಗಳು ಛಾಯಾಚಿತ್ರ ಸಲ್ಲಿಸಲು ಸಾಧ್ಯವಾಗದೆ  ಮನೆಗಳ ಬಿಲ್ ಪಾವತಿಯಾಗುತ್ತಿಲ್ಲ. ಅಧಿಕಾರಿಗಳು ಈ ವಿಚಾರವಾಗಿ ಸ್ಪಂದಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ನಾಗವೇಣಿ ಗೌಡ, ಸದಸ್ಯರಾದ ಜಗದೀಶ ಖಾರ್ವಿ, ಬುದ್ದು ಗೌಡ, ವಿಜಯಕಲಾ ತಳಕೇರಿ, ಜ್ಯೋತಿ ಖಾರ್ವಿ, ಅಜಿತ ಗೌಡ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top