Slide
Slide
Slide
previous arrow
next arrow

‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸಲು ಒತ್ತಾಯಿಸಿ ಗ್ರಾಮ ಸಹಾಯಕರ ಪ್ರತಿಭಟನೆ

300x250 AD

ಬೆಂಗಳೂರು: ಗ್ರಾಮ ಸಹಾಯಕರನ್ನು ‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರು ಸ್ವಾತಂತ್ರ‍್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಮುಷ್ಕರ ಹಮ್ಮಿಕೊಂಡಿರುವ ಗ್ರಾಮ ಸಹಾಯಕರು, ತಾವು ಕಳೆದ 45 ವರ್ಷಗಳಿಂದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರ ಕನಿಷ್ಠ ವೇತನ ನಿಗದಿಪಡಿಸಿಲ್ಲವೆಂದು ದೂರಿದ್ದಾರೆ. ಹಗಲಿರಳು ಕೆಲಸ ಮಾಡಿದರೂ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ. ತಮ್ಮನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕೆಂದು ಸಾವಿರಾರು ಪ್ರತಿಭಟನಾ ನಿರತ ನೌಕರರು ಒತ್ತಾಯಿಸಿದ್ದಾರೆ.
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 10,450 ಗ್ರಾಮ ಸಹಾಯಕರು ಸೇವೆ ಸಲ್ಲಿಸುತ್ತಿದ್ದು, 44 ವರ್ಷಗಳಿಂದ ಇಲಾಖೆಯಲ್ಲಿ ಮಾಸಿಕ 100 ರೂ.ಗಳಿಂದ ಗೌರವಧನ ಪಡೆಯುತ್ತಿದ್ದು, ಪ್ರಸ್ತುತ 13 ಸಾವಿರ ರೂ.ನೀಡಲಾಗುತ್ತಿದೆ. ಇಂದಿನ ದುಬಾರಿ ದಿನಗಳಲ್ಲಿ ಈ ವೇತನವನ್ನು ಪಡೆದು ಜೀವನ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸಬೇಕು, ಡಿ ದರ್ಜೆ ಹುದ್ದೆಗೇರಿಸುವಂತೆ ಆಗ್ರಹಿಸಿದರು.
ಜನಸಮಾನ್ಯರಿಗೆ ಮಾಹಿತಿಗಳನ್ನು ನೀಡುವುದರ ಜೊತೆಗೆ ಫಲಾನುಭವಿಗಳನ್ನು ಗುರುತಿಸುವ ಹಾಗೂ ರೈತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವ ಹಾಗೂ ಗುರುತಿಸುವ ಮುಖ್ಯ ಪಾತ್ರ ಗ್ರಾಮ ಸಹಾಯಕರದ್ದೇ ಆಗಿರುತ್ತದೆ. ಗ್ರಾಮ ಪಂಚಾಯತಿ ನೌಕರರನ್ನು ಸಹ ಸರ್ಕಾರ ಕಾಯಂಗೊಳಿಸಿದೆ. ಅಟಲ್ ಜಿ ಜನಸ್ನೇಹಿ ಕೇಂದ್ರ ಡಾಟಾ ಆಪರೇಟಿರ್‌ಗಳಿಗೆ ಮಾಸಿಕ ರೂ.23 ಸಾವಿರಗಳ ವೇತನವನ್ನು ಜಾರಿ ಮಾಡಿದೆ. ಗ್ರಂಥಪಾಲಕರಿಗೂ ಸಹ ವೇತನ ಹೆಚ್ಚಳ ಮಾಡಿದೆ. ಆದರೆ, ಕಂದಾಯ ಇಲಾಖೆಯಲ್ಲಿ ಕಳೆದ 43 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ಕನಿಷ್ಠ ವೇತನವಾಗಲಿ ಅಥವಾ ಸೇವಾ ಭದ್ರತೆಯಾಗಲಿ ಸರ್ಕಾರವು ನೀಡಿರುವುದಿಲ್ಲ. ಸರ್ಕಾರವು ಮಾನವೀಯತೆಯ ನೆಲೆಯಲ್ಲಿ ಗ್ರಾಮ ಸಹಾಯಕರುಗಳನ್ನು ಫೆ.17ರ ಬಜೆಟ್‌ನಲ್ಲಿ ‘ಡಿ’ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಸಹಾಯಕರ ಸಂಘಟನೆಯ ರಾಜ್ಯ ಅಧ್ಯಕ್ಷ ಎಚ್.ಎನ್.ದೇವರಾಜು, ಮಾಜಿ ಅಧ್ಯಕ್ಷ ಮುದ್ದು ಕೃಷ್ಣ, ಪ್ರಧಾನ ಕಾರ್ಯದರ್ಶಿ ಬಿ.ಶಿವರುದ್ರಪ್ಪ, ಖಜಾಂಚಿ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿಯಾದ ರಾಮಾಂಜನಪ್ಪ, ಕಾನೂನು ನ್ಯಾಯ ಪರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಮಡಿವಾಳಪ್ಪ ವಣ್ಣೂರ, ಮಾದಗಿರಿ ದಂಡೋರ ರಾಜ್ಯ ಅಧ್ಯಕ್ಷ ಶ್ರೀರಾಮಲು, ರಾಜ್ಯ ವಾಲ್ಮೀಕಿ ಸೇನೆ ಘಟಕದ ಅಧ್ಯಕ್ಷ ಪ್ರತಾಪ್ ಮದಕರಿ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top