• Slide
    Slide
    Slide
    previous arrow
    next arrow
  • ಅಡಿಕೆ ಆಮದು ನಿಷೇಧ ಅಸಾಧ್ಯವೆಂದ‌ ಗೃಹ ಸಚಿವ: ಆಮದಿನ ದರ 100ರೂ.ಗಳಷ್ಟು ಏರಿಕೆ

    300x250 AD

    ನವದೆಹಲಿ: ಅಡಕೆ ಆಮದು ಮೇಲಿನ ಕನಿಷ್ಠ ದರವನ್ನು ಕೇಂದ್ರ ಸರ್ಕಾರ ಕೆ.ಜಿ.ಗೆ 100 ರುಪಾಯಿಯಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.

    ಈ ಹಿಂದೆ ಕೆ.ಜಿ.ಗೆ 251 ರುಪಾಯಿ ಕನಿಷ್ಠ ಆಮದು ದರ ನಿಗದಿಯಾ ಗಿತ್ತು. ಇದೀಗ ಕೇಂದ್ರ ಸರ್ಕಾರ ಅದನ್ನು ಇದೀಗ 351 ರುಪಾಯಿಗಳಿಗೆ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪೋ ಸ್ವಾಗತಿಸಿದೆ. ವಿದೇಶದಿಂದ ಭಾರತಕ್ಕೆ ಅಡಕೆ ಆಮದು ಕನಿಷ್ಠ ದರವನ್ನು ಉತ್ಪಾದನಾ ವೆಚ್ಚ ಪರಿಗಣಿಸಿ ಹೆಚ್ಚಳಗೊಳಿಸುವಂತೆ ಕ್ಯಾಂಪ್ಕೊ ಹಾಗೂ ಇನ್ನಿತರ ಸಹಕಾರಿ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದ್ದವು.

    ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಹಾಗೂ ಕೃಷಿ ಯಂತ್ರ ಮೇಳ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜತೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ ಕೊಡ್ಗಿ ಪ್ರತ್ಯೇಕವಾಗಿ ಮಾತನಾಡಿ ಮನವಿ ಮಾಡಿದ್ದರು.

    300x250 AD

    ಭೂತಾನ್ ಸೇರಿದಂತೆ ವಿವಿಧ ದೇಶಗಳಿಂದ ಆಗುತ್ತಿರುವ ಅಡಿಕೆ ಆಮದಿನಿಂದ ಅಡಿಕೆ ಬೆಲೆ ಕುಸಿದು ಅಡಿಕೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೂಡಲೇ ಅಡಿಕೆ ಆಮದನ್ನು ನಿಷೇಧಿಸಿ ಇಲ್ಲದಿದ್ದರೆ ಆಮದು ಅಡಿಕೆಗೆ ಕರ್ನಾಟಕದ ಮಾರುಕಟ್ಟೆಯಿಂದ ನಿರ್ಬಂಧ ಹೇರಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಆದರೆ, ಇದನ್ನು ನಿರಾಕರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ವಿದೇಶಗಳಿಂದ ಅಡಿಕೆ ಆಮದು ತಡೆಯಲು ಸಾಧ್ಯವಿಲ್ಲ. ಸೌಹಾರ್ದ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಆಗಿರುತ್ತದೆ. ಹೀಗಾಗಿ ಅಡಿಕೆ ಆಮದು ನಿಷೇಧ ಮಾಡಲಾಗದು. ಇನ್ನು ಹೀಗೆ ಬಂದ ವಿದೇಶಿ ಅಡಿಕೆಯನ್ನು ರಾಜ್ಯದ ವರ್ತಕರು ಖರೀದಿ ಮಾಡುತ್ತಾರೆ. ಅದನ್ನೂ ತಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top