ಹೊನ್ನಾವರ: ತಾಲೂಕಿನ ಇತಿಹಾಸ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲೊಂದಾದ ಖರ್ವಾ ಗ್ರಾಮದ ಕೊಳಗದ್ದೆ ಶ್ರೀಸಿದ್ದಿವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಸಂಖ್ಯೆಯ ಭಕ್ತಸಾಗರದ ಸಮ್ಮುಖದಲ್ಲಿ ವಿಜ್ರಂಭಣೆಯಿoದ ಸಂಪನ್ನವಾಯಿತು. ರಥಾರೂಡನಾದ ಶ್ರೀಸಿದ್ದಿವಿನಾಯಕನ ದರ್ಶನ ಪಡೆದ ಭಕ್ತಗಣ ಪುನೀತವಾಯಿತು.
ರಥೋತ್ಸವ ಹಿನ್ನಲೆ ಕೌತುಕ ಬಂಧನ, ಬಲಿಪೂಜೆ, ಮಹಾಗಣಪತಿ ಪಲ್ಲಕ್ಕಿ ಉತ್ಸವ, ಸಂಪ್ರೋಕ್ಷಣ್ಯ ನಡೆಯಿತು. ಮುಡೇಶ್ವರದ ಜಯರಾಮ ಅಡಿಗಳ ತಾಂತ್ರಿಕ ತನದಲ್ಲಿ ರಥೋತ್ಸಾವಾಂಗ ಧಾರ್ಮಿಕ ಕಾರ್ಯಕ್ರಮ ನಡೆದವು. ಭಕ್ತರು ಶ್ರೀಸನ್ನಿಧಿಗೆ ಆಗಮಿಸಿ ವಿನಾಯಕನಿಗೆ ವಿವಿಧ ಸೇವೆ ಸಲ್ಲಿಸಿದರು. ರಥೋತ್ಸವಕ್ಕೆ ರಥ ಕಾಣಿಕೆ ಮಾಡಿ, ತಾವು ತಂದ ತೆಂಗು, ಅಡಿಕೆ ಫಲಗಳನ್ನು ರಥಕ್ಕೆ ಕಟ್ಟಿ ಬಾಳೆಹಣ್ಣು ಎಸೆದು, ರಥ ಎಳೆದು ಸಂಭ್ರಮಿಸಿದರು. ಆಟಿಕೆ ಅಂಗಡಿಗಳು ಚಿಣ್ಣರ ಚಿತ್ತ ಸೆಳೆದವು. ಸಿಹಿಖಾದ್ಯ ಅಂಗಡಿಗಳಿದ್ದವು.