Slide
Slide
Slide
previous arrow
next arrow

ಫೆ.20ಕ್ಕೆ ಲಡಾಕ್’ನಲ್ಲಿ ಹೆಪ್ಪುಗಟ್ಟಿದ ಸರೋವರ ಮ್ಯಾರಥಾನ್‌

300x250 AD

ನವದೆಹಲಿ: 13,862 ಅಡಿ ಎತ್ತರದಲ್ಲಿರುವ ಲಡಾಖ್‌ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ಭಾರತದ ಮೊದಲ “ಹೆಪ್ಪುಗಟ್ಟಿದ ಸರೋವರ ಮ್ಯಾರಥಾನ್‌ (frozen-lake marathon)” ಫೆಬ್ರವರಿ 20 ರಂದು ನಡೆಯಲಿದೆ.

ಈ ಮ್ಯಾರಥಾನ್‌ ಅನ್ನು ಆಯೋಜಿಸುವ ನಿಟ್ಟಿನಲ್ಲಿ  ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಸರಿಯಾದ ಕ್ರಿಯಾ ಯೋಜನೆಯನ್ನು ಜಾರಿಗೆ ತರುತ್ತಿವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

21 ಕಿಲೋಮೀಟರ್‌ಗಳ ಮ್ಯಾರಥಾನ್, ಲುಕುಂಗ್‌ನಲ್ಲಿ ಆರಂಭಗೊಂಡು  ಮಾನ್ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ. ಭಾರತ ಮತ್ತು ವಿದೇಶದಿಂದ ಆಯ್ದ 75 ಕ್ರೀಡಾಪಟುಗಳು ಓಟದಲ್ಲಿ ಭಾಗವಹಿಸುತ್ತಿದ್ದಾರೆ. ವಿಶ್ವದ ಅತಿ ಎತ್ತರದ “ಹೆಪ್ಪುಗಟ್ಟಿದ ಸರೋವರ ಮ್ಯಾರಥಾನ್” ಗಾಗಿ ಗಿನ್ನೆಸ್ ವಿಶ್ವ ದಾಖಲೆ ಮಾಡಲು ಭಾಗವಹಿಸುವವರಿಗೆ ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

300x250 AD

ಲಡಾಖ್ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್-ಲೇಹ್, ಪ್ರವಾಸೋದ್ಯಮ ಇಲಾಖೆ ಮತ್ತು ಲೇಹ್ ಜಿಲ್ಲಾಡಳಿತದ ಸಹಯೋಗದೊಂದಿಗೆ ಲಡಾಖ್‌ನ ಅಡ್ವೆಂಚರ್ ಸ್ಪೋರ್ಟ್ಸ್ ಫೌಂಡೇಶನ್ (ASFL) ಇದನ್ನು ಆಯೋಜಿಸುತ್ತಿದೆ.

“ಸುಸ್ಥಿರ ಅಭಿವೃದ್ಧಿ ಮತ್ತು ಕಾರ್ಬನ್ ನ್ಯೂಟ್ರಲ್ ಲಡಾಖ್ ಸಂದೇಶದೊಂದಿಗೆ ಆಯೋಜಿಸಲಾಗುವ ಈ ಸವಾಲಿನ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಭಾರತೀಯ ಸೇನೆ ಮತ್ತು ITBP ಸಹ ಸರಿಯಾದ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ” ಎಂದು ಲೇಹ್‌ನ ಜಿಲ್ಲಾ ಅಭಿವೃದ್ಧಿ ಆಯುಕ್ತ ಶ್ರೀಕಾಂತ್ ಬಾಳಾಸಾಹೇಬ್ ಸೂಸೆ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top