ಯಲ್ಲಾಪುರ: ರಾಜ್ಯದಲ್ಲಿಯೇ ಮೊದಲ ಅತ್ಯಾಧುನಿಕ `ಜೇನು ಮೇಣ ತಯಾರಿಕಾ ಘಟಕ’ ತಾಲೂಕಿನ ದೋಣಗಾರಿನ ಮುಂಡಗೋಡಿ ಬಳಿ ಸ್ಥಾಪನೆಯಾಗಿದೆ.
ಇಲ್ಲಿನ ಜೇನು ಸಾಕಾಣಿಕೆದಾರ ತಿಮ್ಮಣ್ಣ ಭಟ್ಟ 11 ಲಕ್ಷ ರೂ ವೆಚ್ಚದಲ್ಲಿ `ಜೇನು ಮೇಣ ತಯಾರಿಕಾ ಘಟಕ’ವನ್ನು ಸ್ಥಾಪಿಸಿದ್ದಾರೆ. ಸಂಪೂರ್ಣ ಸ್ವಯಂ ಚಾಲಿತ ಘಟಕ ಇದಾಗಿದ್ದು, ರಾಜ್ಯದಲ್ಲಿ ಬೇರೆ ಎಲ್ಲಿಯೂ ಈ ಮಾದರಿಯ ಘಟಕವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ `ಅಗ್ರಿ ಸ್ಟಾರ್ಟಅಪ್’ ಯೋಜನೆ ಅಡಿ ಈ ಘಟಕ ಅನುಮೋದನೆ ಪಡೆದಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದೊಂದಿಗೆ ತಿಮ್ಮಣ್ಣ ಭಟ್ಟ ಅವರು ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಅನುಮೋದನೆ ಪತ್ರವನ್ನು ವಿತರಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ, ವಿಸ್ತರಣಾ ನಿರ್ದೇಶಕ ಡಾ. ಎ.ಎಸ್. ವಸ್ತ್ರದ್ ಹಾಗೂ ರಿಜಿಸ್ಟಾರ್ ಪಿ. ಎಲ್. ಹೂಗಾರ್ ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.