ಹೊನ್ನಾವರ: ಮಂಕಿ ದೇವರಗದ್ದೆ ಕೊಂಕಣಿ ಖಾರ್ವಿ ಸಮಾಜದ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉದ್ಯಮಿ ದೀಪಕ ನಾಯ್ಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರಂಭಿಸಿದ ವಿದ್ಯಾನಿಧಿ ಯೋಜನೆ ನಿಜಕ್ಕೂ ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಕೊಂಕಣಿಖಾರ್ವಿ ಮಹಾಜನ ಸಭಾದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಸಾರಂಗರವರು ಮಾತನಾಡಿ ಮಂಕಿ ಗ್ರಾಮದ ವಿದ್ಯಾರ್ಥಿಗಳು ಪ್ರತಿಭಾವಂತರು, ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ವೇದಿಕೆಯು ಚಾಲನೆ ನೀಡಿರುವ ವಿದ್ಯಾನಿಧಿಯೋಜನೆಯ ಬಗ್ಗೆ ಅಭಿನಂದನೆ ವ್ಯಕ್ತಪಡಿಸಿದರು.
ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತ ಅಧಿಕಾರೇತರ ಸದಸ್ಯ ಸುರೇಶ ಖಾರ್ವಿ ಮಾತನಾಡಿ, ಕೊಂಕಣಿ ಸಮಾಜ ಭಾಂದವರು ಸಾಹಸವಂತರು, ಕ್ರೀಡಾಪಟುಗಳು ಹಾಗೂ ಮನೋರಂಜನಾ ಪ್ರೀಯರು. ಶಿಕ್ಷಣಕ್ಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ಸಂಘಟನೆ ಸಂಘಟಿತವಾಗಿದೆ ಎಂದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತಿ ನಿಕಟಪೂರ್ವ ಅಧ್ಯಕ್ಷ ಶಿವರಾಜ ಮೇಸ್ತ, ಅಖಿಲ ಭಾರತ ಕೊಂಕಣಿ ಮಹಾಜನ ಸಭಾದ ನಿರ್ದೇಶಕ ತಿಮ್ಮಪ್ಪ ಖಾರ್ವಿ ಭಟ್ಕಳ, ಕೊಂಕಣಿ ಖಾರ್ವಿ ಸಮಾಜ ಮಂಕಿ ಅಧ್ಯಕ್ಷ ಮಂಜುನಾಥ ಮೋತ್ಯಾ ಖಾರ್ವಿ, ಮೀನುಗಾರರ ಸಹಕಾರಿ ಸಂಘ ಮಂಕಿಯ ಅಧ್ಯಕ್ಷ ಉಮೇಶ ಅಣ್ಣಪ್ಪ ಖಾರ್ವಿ, ಪತ್ರಕರ್ತ ವೆಂಕಟೇಶ ಮೇಸ್ತ, ತಾಲ್ಲೂಕಾ ಕೊಂಕಣಿ ಖಾರ್ವಿ ಸಮಾಜದ ಪ್ರಧಾನ ಕಾರ್ಯದರ್ಶಿ ಕೇಶವ ತಾಂಡೇಲ್, ಸಾಂಪ್ರದಾಯಿಕ ನಾಡದೋಣಿ ಸಂಘದ ಅಧ್ಯಕ್ಷ ಅಣ್ಣಪ್ಪ ಖಾರ್ವಿ, ಮುಖಂಡರಾದ ಸುಬ್ರಾಯ ನಾಯ್ಕ, ಆನಂದ ನಾಯ್ಕ ಮುಂತಾದವರಿದ್ದರು.
ಸಭಾ ಕಾರ್ಯಕ್ರಮದ ನಂತರ ಆಗಮಿಸಿದ್ದ ಮಾಜಿ ಶಾಸಕ ಮಂಕಾಳ ವೈದ್ಯರವರು ವಿದ್ಯಾನಿಧಿಯೋಜನೆಗೆ ಒಂದು ಲಕ್ಷ ರೂಪಾಯಿ ಘೋಷಣೆ ಮಾಡಿ, ಇನ್ನು ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ವಿದ್ಯಾ ನಿಧಿ ಯೋಜನೆಗೆ ಧನಸಹಾಯ ಮಾಡಿದ ಮಾಜಿ ಶಾಸಕ ಮಂಕಾಳ ವೈದ್ಯ ಹಾಗೂ ಸಮಾಜ ಸೇವೆಸಲ್ಲಿಸಿದ ಗೋವಿಂದ ಖಾರ್ವಿ ಹಳೇಮಠ, ಕೃಷ್ಣ ಖಾರ್ವಿ ಹಾಗೂ ರವಿ ಖಾರ್ವಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಗಮಿಸಿದ ಗಣ್ಯರು ವಿದ್ಯಾ ನಿಧಿಯೋಜನೆಗೆ ಧನಸಹಾಯ ಮಾಡಿದರು.
ಚಂದ್ರ ಖಾರ್ವಿ ಸ್ವಾಗತಿಸಿದರು. ರವಿ ವೆಂಕಟೇಶ ಖಾರ್ವಿ ವಂದಿಸಿದರು. ಶಿಕ್ಷಕ ಉದಯ ಎಚ್.ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯರು ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಾಜದ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಿಸಿದ ಅಮೇಜಿಂಗ್ ಸ್ಟೆರ‍್ಸ್ ಗಂಗೊಳ್ಳಿ ತಂಡದಿoದ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಂಡವು.