Slide
Slide
Slide
previous arrow
next arrow

ಏತ ನೀರಾವರಿಯ ಪಂಪ್ ಹೌಸ್ ಕಾಮಗಾರಿ ಪರಿಶೀಲಿಸಿದ ಆರ್‌ವಿ ದೇಶಪಾಂಡೆ

300x250 AD

ದಾಂಡೇಲಿ: ಹಳಿಯಾಳ ತಾಲೂಕಿನ 46 ಕೆರೆ ಮತ್ತು 19 ಬಾಂದಾರುಗಳಿಗೆ ನೀರು ತುಂಬಿಸುವ ಕಾಳಿ ಏತ ನೀರಾವರಿ ಯೋಜನೆಗಾಗಿ ದಾಂಡೇಲಿ ನಗರದ ಹಾಲಮಡ್ಡಿ, ಮೂರು ನಂ ಗೇಟ್ ಹತ್ತಿರದ ಕಾಳಿ ನದಿಯ ದಂಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪಂಪ್‌ಹೌಸ್ ನಿರ್ಮಾಣ ಕಾಮಗಾರಿಯನ್ನು ಶಾಸಕ ಆರ್.ವಿ.ದೇಶಪಾಂಡೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಷ್ಟರೊಳಗೆ ಕಾಮಗಾರಿ ಪೂರ್ಣ ಮುಗಿದು ಕಾಳಿ ಏತ ನೀರಾವರಿ ಯೋಜನೆ ಲೋಕಾರ್ಪಣೆಯಾಗಬೇಕಿತ್ತು. ಕೆಲವೊಂದು ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು ಮತ್ತು ಶೀಘ್ರದಲ್ಲಿ ಮುಕ್ತಾಯವಾಗಬೇಕು. ಕಳೆದೆರಡು ವರ್ಷಗಳಿಂದ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ರೈತಾಪಿ ವರ್ಗಕ್ಕೆ ನೀರಿನ ಸಮಸ್ಯೆ ಎದುರಾಗಿಲ್ಲ. ಕಾಳಿ ಏತ ನೀರಾವರಿ ಯೋಜನೆಯಿಂದ ಹಳಿಯಾಳ ತಾಲೂಕಿನ ಕೃಷಿ ಚಟುವಟಿಕೆಗೆ ಬಹಳಷ್ಟು ಅನುಕೂಲವಾಗಲಿದೆ. ಪರಿಣಾಮವಾಗಿ ರೈತರ ಬದುಕು ಹಸನಾಗಲಿದೆ. ಈ ಯೋಜನೆ ಬಹುವರ್ಷಗಳ ಕನಸಾಗಿದ್ದು, ಇನ್ನೂ ಕೆಲವೆ ಸಮಯದೊಳಗೆ ಕಾಳಿ ಏತ ನೀರಾವರಿ ಯೋಜನೆ ಲೋಕಾರ್ಪಣೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ನಾಯ್ಕರ್, ಕರ್ನಾಟಕ ರಾಜ್ಯ ನೀರಾವರಿ ನಿಗಮ ನಿಯಮಿತ ಇದರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮರಾಠಿ, ಸಹಾಯಕ ಅಭಿಯಂತರರಾದ ಮಹೇಶ್, ಶ್ರೀ.ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟಿನ ಧರ್ಮದರ್ಶಿ ಪ್ರಶಾಂತ್ ದೇಶಪಾಂಡೆ, ಗುತ್ತಿಗೆ ಸಂಸ್ಥೆಯ ಅಧಿಕಾರಿಗಳಾದ ಲಕ್ಷ್ಮಣ ರೆಡ್ಡಿ, ಅಜಯ್, ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್, ದಾಂಡೇಲಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಸ್ಮಾನ್ ಮುನ್ನ ವಹಾಬ್, ಮುಖಂಡರುಗಳಾದ ಕರೀಂ ಅಜ್ರೇಕರ್, ಇಕ್ಬಾಲ್ ಶೇಖ್, ಎಸ್.ಎಸ್.ಪೂಜಾರ್, ರಫೀಕ್ ಖಾನ್ ಅಂಬೇವಾಡಿ, ಕೀರ್ತಿ ಗಾಂವಗರ್, ರಫೀಕ್ ಅಹ್ಮದ್ ಖಾನ್ ಗಾಂಧಿನಗರ, ಪ್ರತಾಪ ಸಿಂಗ್ ರಜಪೂತ್, ರಿಯಾಜ್ ಬಾಬು ಸೈಯದ್, ಸುದರ್ಶನ್ ಆರ್.ಸಿ, ಪ್ರಭುದಾಸ್ ಏನಿಬೇರಾ, ದಾಂಡೇಲಿ ಟ್ರಾನ್ಸಪೋರ್ಟ್ ಅಸೋಶಿಯೇಶನ್ ಅಧ್ಯಕ್ಷ ದಿನೇಶ್ ಹಳದನಕರ, ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಪಾಸಲ್ಕರ್, ಸ್ಥಳೀಯರಾದ ಮೋಹನ ಸನದಿ ಮೊದಲಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top