Slide
Slide
Slide
previous arrow
next arrow

ಹಾಲು ಉತ್ಪಾದನೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ: ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ

300x250 AD

ಶಿರಸಿ: ತಾಲೂಕಿನ ಬುಗುಡಿಕೊಪ್ಪದಲ್ಲಿ ಬುಗುಡಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ದೀಪ ಬೆಳಗಿ ಹಾಲು ಅಳೆಯುವುದರ ಮುಖಾಂತರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬುಗುಡಿಕೊಪ್ಪ ಗ್ರಾಮವು ಈ ಮೊದಲು ಶಿರಸಿ ತಾಲೂಕಿನ ದಾಸನಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಉಪಕೇಂದ್ರವಾಗಿ ಕಾರ್ಯನಿರ್ವಹಿಸಿತ್ತಾ ಬಂದಿದ್ದು ಇದೀಗ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಸ್ವತಂತ್ರವಾಗಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವಾಗಿ ಪ್ರಾರಂಭವಾಗಿದ್ದು, ಈ ಭಾಗದ ರೈತರನ್ನು ಸಹಕಾರಿ ವ್ಯವಸ್ಥೆಗೆ ತರಬೇಕು ಎಂಬ ಉದ್ದೇಶದಿಂದ ಹಾಲು ಉತ್ಪಾದಕ ರೈತರ ಜೊತೆ ಸಭೆ ನಡೆಸಿ ಸರಕಾರ ಹಾಗೂ ಒಕ್ಕೂಟದ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿ ರೈತರ ಮನವೊಲಿಸಿ ಬುಗುಡಿಕೊಪ್ಪದಲ್ಲಿ ಒಂದು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಲಾಯಿತು ಎಂದರು. ಹಾಲು ಉತ್ಪಾದಕ ರೈತರು ಹೆಚ್ಚು ಹಾಲು ಉತ್ಪಾದನೆಯ ಜೊತೆಯಲ್ಲಿ ಮುಖ್ಯವಾಗಿ ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು, ಜಿಲ್ಲೆಯ ಸಹಕಾರಿ ವ್ಯವಸ್ಥೆಯ ಅಡಿಯಲ್ಲಿ ಹಾಲು ಉತ್ಪಾದನಾ ಕ್ಷೇತ್ರ ಬೆಳೆಯುತ್ತಿರುವುದರಿಂದ ತಾವೆಲ್ಲರೂ ಇದರ ಜೊತೆ ಕೈ ಜೋಡಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು ಎಂದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸುವ ಗುರಿಯೊಂದಿಗೆ ನಾವು ಹೊರಟಿದ್ದೇವೆ. ಅದಕ್ಕಾಗಿ ತಾವುಗಳು ಮನೆಗೊಂದು ಹಸು ಕಟ್ಟಿ ಹಾಲು ಉತ್ಪಾದನಾ ಕ್ಷೇತ್ರವನ್ನು ಇನ್ನಷ್ಟು ಬಲ ಪಡಿಸಬೇಕೆಂದು ವಿನಂತಿಸಿಕೊಂಡರು. ನಮ್ಮ ಜಿಲ್ಲೆಯ ಹಾಲನ್ನು ಇಲ್ಲೆಯೇ ಪ್ಯಾಕ್‌ ಮಾಡಿ ಗ್ರಾಹಕರಲ್ಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಜಿಲ್ಲೆಯ ಮಾರುಕಟ್ಟೆಯ ಬೇಡಿಕೆಯನ್ನು ಸರಿದೂಗಿಸಲು ಈಗಿರುವ ಹಾಲು ಶೇಖರಣೆಗಿಂತ ಪ್ರತೀ ದಿನಕ್ಕೆ ಇನ್ನೂ 20 ಸಾವಿರ ಲೀಟರ್‌ನಷ್ಟು ಅಧಿಕ ಹಾಲಿನ ಅವಶ್ಯಕತೆಯಿದ್ದು ತಾವುಗಳು ಹೈನುಗಾರಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೈನುಗಾರಿಕೆಯನ್ನು ಉಪ ಕಸುಬಾಗಿಸದೇ ಅದನ್ನು ಮುಖ್ಯ ಕಸುಬಾಗಿ ಪರಿಗಣಿಸಿಕೊಂಡು ಉತ್ತಮ ಗುಣಮಟ್ಟದ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವಂತೆ ಕರೆ ನೀಡಿದರು. ಹಾಗೂ ಸಂಘಕ್ಕೆ ಸಿಗಬಹುದಾದ ಎಲ್ಲಾ ಸೌಕರ್ಯಗಳನ್ನು ಕೊಡಿಸಲು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆಂದು ತಿಳಿಸಿ, ಶುಭಕೋರಿದರು.
ಈ ಕಾರ್ಯಕ್ರಮದಲ್ಲಿ ಬುಗುಡಿಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಧರ ಎಸ್‌ ಗೌಡ, ಸಂಘದ ಆಡಳಿತ ಮಂಡಳಿಯ ಸದಸ್ಯರುಗಳು, ಹಾಲು ಉತ್ಪಾದಕ ರೈತರು, ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್‌, ಸಹಾಯಕ ವ್ಯವಸ್ಥಾಪಕರಾದ ಡಾ. ವಿವೇಕ್‌ ಎಸ್‌ ಆರ್‌, ವಿಸ್ತರಣಾಧಿಕಾರಿ ಮೌನೇಶ, ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಜಯಂತ ಪಟಗಾರ ಉಪಸ್ಥಿತರಿದ್ದರು. ಮಂಜು ಬಿ ನಾಯ್ಕ ಸ್ವಾಗತಿಸಿದರೆ, ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ನಾಗೇಶ ಕನ್ನ ನಾಯ್ಕ ವಂದಿಸಿದರು.

300x250 AD
                                              ಸುರೇಶ್ಚಂದ್ರ ಕೃಷ್ಣ ಹೆಗಡೆ, ಕೆಶಿನ್ಮನೆ
                                     ಅಧ್ಯಕ್ಷರು ಧಾರವಾಡ ಸಹಕಾರಿ ನೌಕರರ ಕಲ್ಯಾಣ 
                                          ಸಂಘ ನಿ., ಧಾರವಾಡ ಹಾಗೂ ನಿರ್ದೇಶಕರು  
                                          ಕೆ.ಡಿ.ಸಿ.ಸಿ. ಬ್ಯಾಂಕ್‌ ಲಿ., ಶಿರಸಿ 9481988199
Share This
300x250 AD
300x250 AD
300x250 AD
Back to top