ಹೊನ್ನಾವರ: ತಾಲೂಕಿನ ಬಾಳೆಗದ್ದೆ ಶ್ರೀವೆಂಕಟ್ರಮಣ ದೇವರ ವಾರ್ಷಿಕ ವರ್ಧಂತಿ ಉತ್ಸವ ಫೆ.3ರಂದು ಶ್ರೀ ಕ್ಷೇತ್ರ ಮಂಜುಗುಣಿಯ ವೇ.ಪುಟ್ಟ ಭಟ್ಟ ಹಾಗೂ ಅಣ್ಣಯ್ಯ ಭಟ್ಟ ಧಾರ್ಮಿಕ ಆರ್ಚಾಯತ್ವದಲ್ಲಿ ನಡೆಯಲಿದೆ.
ಫೆ.2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊoಡು ರಾತ್ರಿ 8:30ರವರೆಗೆ ನಡೆಯಲಿದೆ. ಫೆ.3ರಂದು 1008 ಬ್ರಹ್ಮಕಲಾಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಪಲ್ಲಕ್ಕಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ನೃತ್ಯಸ್ವರ ಕಲಾ ಟ್ರಸ್ಟ್ ಕವಲಕ್ಕಿ ಇವರಿಂದ ಭರತನಾಟ್ಯ ನೃತ್ಯರೂಪಕ ನಾಡಿನ ಪ್ರಸಿದ್ದ ಕಲಾವಿದರಿಂದ ನಾಟಕ ‘ಕಣ್ಣಾಮುಚ್ಚಾಲೆ’ ನಾಟಕ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.3ರಿಂದಬಾಳೆಗದ್ದೆ ಶ್ರೀವೆಂಕಟ್ರಮಣ ದೇವರ ವರ್ಧಂತಿ ಉತ್ಸವ
