ಜೊಯಿಡಾ: ತಾಲೂಕಿನ ನುಜ್ಜಿ ಗ್ರಾಮದ ಶ್ರೀರಾಮಲಿಂಗ ದೇವರ ಜಾತ್ರೆ ಜ.19 ಮತ್ತು 20ರಂದು ನಡೆಯಲಿದೆ.
ನುಜ್ಜಿ ಜಾತ್ರೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದೇವರ ಅಭಿಷೇಕ, ದೇವರ ಅಲಂಕಾರ, ಮಹಾಪೂಜೆ, ಸತ್ಯನಾರಾಯಣ ದೇವರ ಪೂಜೆ, ಸಾತೇರಿ ದೇವರ ಪೂಜೆ, ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ವನ ಪೂಜೆ, ಅನ್ನಸಂತರ್ಪಣೆ, ಲೀಲಾವು ಕಾರ್ಯಕ್ರಮ, ರಾತ್ರಿ ಶ್ರೀ ರಾಮಲಿಂಗ ನಾಟ್ಯ ಮಂಡಳಿಯಿoದ ತಾಯಿ ತೂಗದ ತೊಟ್ಟಿಲು ಸಾಮಾಜಿಕ ನಾಟಕ ನಡೆಯಲಿದೆ. ಜ.20ರಂದು ಬೆಳಿಗ್ಗೆ 6 ಗಂಟೆಗೆ ಮಹಿಳೆಯರಿಂದ ದೀಪೋತ್ಸವ ಕಾರ್ಯಕ್ರಮಗಳು ಮತ್ತು ಪಲ್ಲಕ್ಕಿ ಉತ್ಸವ, ಮೆರವಣಿಗೆ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ನುಜ್ಜಿ ಜಾತ್ರೆ ನಂತರ ತಾಲೂಕಿನಲ್ಲಿ ಈ ವರ್ಷದ ಜಾತ್ರೆಗಳ ಜಾತ್ರೆಗೆ ಚಾಲನೆ ಸಿಗಲಿದೆ. ಜ.26ರಂದು ಸಂತ್ರೀ ಗ್ರಾಮದ ಶ್ರೀನಾಗನಾಥ ದೇವರ ಜಾತ್ರೆ, 28ರಂದು ಕಾತೇಲಿ ಗ್ರಾಮದ ಶ್ರೀಶಾಂಡಿಲ ಮಹಾರಾಜರ ಜಾತ್ರೆ, ಉಳವಿ ಶ್ರೀಚನ್ನಬಸವೇಶ್ವರ ದೇವರ ಜಾತ್ರೆ 28ರಿಂದ ಫೆ.6ರವರೆಗೆ ನಡೆಯಲಿದೆ. ಫೆ.10ರಂದು ಹುಡಸಾ ಜಾತ್ರೆ, 12ರಂದು ಡೇರೀಯಾ, ಬಾಡಪೋಲಿ ಮತ್ತು ಕುಂಬಗಾಳಿ ಜಾತ್ರೆ, 18ರಂದು ಶಿವರಾತ್ರಿಯ ಅಂಗವಾಗಿ ಕವಳಾ, ನಿಗುಂಡಿ, ಅಣಶಿ, ಝಾಲಾವಳಿ, ವಿರಲ, ಕೋನಶೇತ, ಮುಂತಾದೆಡೆಗಳಲ್ಲಿ ಜಾತ್ರೆ ನಡೆಯಲಿವೆ. ನಂತರ ಗಾಂಗೋಡಾ, ದುದಗಾಳಿ, ಕಾರ್ಟೋಳಿ, ಶ್ರೀಪತಿ, ಕುಂಬಾರ ವಾಡಾ, ರಾಮನಗರ, ಕಾಳಸಾಯಿ, ಬೀಡೋಲಿ, ಸಿದ್ದೋಲಿ, ಅರ್ವುಲಿ, ರುಂಡಾಳಿ, ಇದಲ್ಲದೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾತ್ರೆಗಳು ಸಾಲಾಗಿ ನಡೆಯಲಿವೆ. ಜೊಯಿಡಾದ ಶ್ರೀಸಿದ್ದೇಶ್ವರ ದೇವರ ಮತ್ತು ಖಾಫ್ರಿ ದೇವರ ಜಾತ್ರೆಗಳು ಕೊನೆಯದಾಗಿ ನಡೆಯಲಿವೆ.