Slide
Slide
Slide
previous arrow
next arrow

ಕನ್ಯಾದಾನದಿಂದ 21 ತಲೆಮಾರಿನ ಪಾಪಗಳು ನಾಶ: ವಿ. ಉಮಾಕಾಂತ್ ಭಟ್ ಕೆರೆಕೈ

300x250 AD

ಶಿರಸಿ : ಕನ್ಯಾದಾನ ಪರಮಶ್ರೇಷ್ಟವಾದುದು. ಈ ದಾನದಿಂದ 21 ತಲೆಮಾರಿನಲ್ಲಿ ಅಂದರೆ ಆ ಕುಟುಂಬದಲ್ಲಿ ಮಾಡಿದ ಪಾಪಗಳೆಲ್ಲ ಹೋಗುತ್ತೇವೆ ಎಂಬುದು ನಾವು ನಮ್ಮ ಪರಂಪರೆಯಿoದ ಕೇಳಿ ತಿಳಿದಿದ್ದೇವೆ. ಇದನ್ನು ಕನ್ಯಾ ಪಿತೃಗಳಿಗೆ ಮಾತ್ರ ಮಾಡಬಹುದಾಗಿದೆ ಎಂದು ಖ್ಯಾತ ವಿದ್ವಾಂಸ ಡಾ.ಉಮಾಕಾಂತ ಭಟ್ಟ ಕೆರೆಕೈ ಹೇಳಿದರು.
ಅವರು ಇತ್ತೀಚೆಗೆ ಶಿರಸಿಯ ಸೋವೆನೀರ್ ಸಭಾಭವನದಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಮತ್ತು ಸುಮಾ ಜೋಷಿಯವರ ಸುಪುತ್ರಿ ಭಾಗ್ಯಶ್ರೀ ಹಾಗೂ ಶ್ರೀರಾಮ ಮೆಡಿಕಲ್ ಮಾಲಕ ಬಂಡಿಮನೆಯ ಶ್ರೀಪಾದ ಎನ್. ಹೆಗಡೆ ಮತ್ತು ಭಾರತಿ ಇವರ ಪುತ್ರ ನಾರಾಯಣ ಇವರ ವಿವಾಹ ಸಂದರ್ಭದಲ್ಲಿ ನಡೆದ ವಿವಾಹದ ಮಹತ್ವದ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಯುವಜನಾಂಗ ಬಹುದೊಡ್ಡ ಕನಸುಗಳನ್ನು ಕಾಣುತ್ತಾರೆ. ಅದು ತಪ್ಪಲ್ಲ ಆದರೆ ಕನಸೇ ಬದುಕಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು. ವಿವಾಹ ಎನ್ನುವುದು ಪವಿತ್ರ ಸಂಬoಧ ಬೆಳೆಸುವುದು ಎಂಬ ಅರ್ಥ ನೀಡುತ್ತದೆ. ವಿವಾಹ ಮೊದಲೇ ದೈವೀ ಸಂಕಲ್ಪದoತೆ ನಿಶ್ಚಯವಾಗುತ್ತದೆ ಎನ್ನುವುದು ನಮ್ಮ ಪರಂಪರೆಯಿoದ ತಿಳಿದುಕೊಂಡಿದ್ದೇವೆ. ಲಕ್ಷ್ಮೀನಾರಾಯಣರ ವಿವಾಹವನ್ನು ನಾವು ಇಲ್ಲಿ ಕಲ್ಪನೆ ಮಾಡುತ್ತೇವೆ. ಶಿವ ಮತ್ತು ಶಿವೆ ಇರ್ವರು ಸೇರಿ ಅರ್ಧನಾರೀಶ್ವರ. ಇವರು ಅಣುವಿನಲ್ಲಿಯು ಇದ್ದಾರೆ. ಅಂತಹ ಶ್ರೇಷ್ಟ ವಿವಾಹದಿಂದ, ಕನ್ಯಾದಾನದಿಂದ ಬ್ರಹ್ಮ ಲೋಕ ಪ್ರಾಪ್ತಿಯಾಗುತ್ತದೆ ಎಂಬುದು ಕೂಡ ಸನಾತನ ಧರ್ಮದಿಂದ ತಿಳಿದುಕೊಂಡಿದ್ದೆವೆ.
ವಿವಾಹವೆಂಬುದು ರಕ್ತ ಸಂಬoಧ ಹಾಗಂತ ರಕ್ತದಾನ ಸಂಬoಧವಲ್ಲ. ಮನಸ್ಸು ನೀಡಿದಾಗ ಮಾತ್ರ ಸಂಬoಧ ಗಟ್ಟಿಗೊಳ್ಳುತ್ತದೆ. ಆದರೆ ನಮ್ಮನ್ನಾಳುವ ಸರ್ಕಾರಗಳು ಸಮಾಜದಲ್ಲಿ ಬೇರೆಯವರ ಮನೋಭಾವವನ್ನು ತುಳಿದು ಸಮಾಜದ ದುರ್ಗತಿಗೆ ಕಾರಣವಾಗುವಂತೆ ಮಾಡುತ್ತಿರುವುದು ಸಮಾಜಕ್ಕೆ ಒಳಿತಲ್ಲ ಎಂದ ಅವರು, ವಿವಾಹ ವಿಶಿಷ್ಟವಾದ ಹೊಣೆಗಾರಿಕೆ ಪ್ರಾಪ್ತವಾಗುತ್ತದೆ. ಗಂಡ-ಹೆoಡತಿ ಇಬ್ಬರು ಕೂಡ ತಮ್ಮ ಮತ್ತು ತಮ್ಮ ಬಂಧುಗಳ ಸುಖ-ದುಃಖದಲ್ಲಿ ಸಮಾನವಾಗಿ ಹೊಣೆಗಾರಿಕೆ ನಿರ್ವಹಿಸಬೇಕು.
ಇಂದು ಸಮಾಜದಲ್ಲಿ ಪಾಶ್ಚಿಮಾತ್ಯ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ಮಗು ಬೇಡ ಎಂಬ ಕೆಟ್ಟ ಚಿಂತನೆಗೆ ಒಳಗಾಗಿ ತಮ್ಮ ಕುಟುಂಬ ವ್ಯವಸ್ಥೆಯನ್ನು ಹಾಳುಮಾಡಿಕೊಳ್ಳುವ ಸ್ಥಿತಿಯತ್ತ ನಡೆಯುತ್ತಿದ್ದಾರೆ. ಶ್ರೇಷ್ಠ ಭಾರತ ಈ ವಿಶ್ವದಲ್ಲೇ ಸಂಸ್ಕಾರ, ಸಂಸ್ಕೃತಿ, ಪರಂಪರೆ ಇವೆಲ್ಲ ಮೌಲ್ಯ ಬೆಳೆಸಿಕೊಂಡು ಬಂದಿದೆ. ಅದನ್ನು ನಾಶ ಮಾಡಿದರೆ ವಿಚ್ಛೇದನದಂತಹ ಕೆಟ್ಟ ಕಾರ್ಯಗಳು ನಡೆಯುವುದಕ್ಕೆ ಸಾಧ್ಯವಾಗುತ್ತದೆ. ಅದು ಈ ಪುಣ್ಯ ನೆಲದಲ್ಲಿ ಆಗಕೂಡದು. ಅದನ್ನು ಯುವ ಜನಾಂಗ ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ವಿವಾಹದ ಶ್ರೇಷ್ಠತೆ ಜಗತ್ತಿಗೆ ಆದರ್ಶಪ್ರಾಯವಾಗಿ ತನ್ನ ಶ್ರೇಷ್ಠ ನೆಲದ ಸತ್ವವನ್ನು ಹಿಂದಿನoತೆ ಮುಂದುವರೆದು ತೋರಿಸುವ ಕಾರ್ಯ ನಡೆಯಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ, ಡಾ.ರಾಮಚಂದ್ರ ಹೆಗಡೆ ಬಂಡೀಮನೆ, ವಿಷ್ಣು ಹೆಗಡೆ ಯಲ್ಗುಪ್ಪ, ನಾರಾಯಣ ಜೋಷಿ ಗೋಕರ್ಣ, ಗಣೇಶ ಜೋಷಿ ಗೋಕರ್ಣ, ಶ್ರೀಪಾದ ಹೆಗಡೆ, ಪಾರ್ವತಿ ಹೆಗಡೆ, ಸುಮಂಗಲಾ ಜೋಷಿ, ಭಾರತಿ ಹೆಗಡೆ, ನಾರಾಯಣ ಹೆಗಡೆ, ಡಾಕ್ಟರ್ ಭಾಗ್ಯಶ್ರೀ ಹೆಗಡೆ, ಶ್ರೀಮುಖ ಹೆಗಡೆ, ಮತ್ತಿತರರು ಉಪಸ್ಥಿತರಿದ್ದರು.
ಚಿನ್ಮಯ ಜೋಷಿ ವೇದಘೋಷ ಪಠಿಸಿದರು. ಎಂ.ಎಸ್.ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಟಿ.ಎಸ್.ತಿಲಕ್‌ರಾಜ್ ನಿರ್ವಹಿಸಿ, ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top