ಶಿರಸಿ : ಸ್ವರಾಧ್ಯ ಸಂಗೀತ ವಿದ್ಯಾಲಯ ಶಿರಸಿ ಇದರ ವಾರ್ಷಿಕೋತ್ಸವ ಅಂಗವಾಗಿ ಸ್ವರಾಧ್ಯಾ ಹಬ್ಬ -2023 ಕಾರ್ಯಕ್ರಮವನ್ನು ಜ.15 ರಂದು ರವಿವಾರ ಬೆಳಿಗ್ಗೆ 10 ಗಂಟೆಯಿಂದ ನಗರದ ಟಿಆರ್ಸಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ ಯವರೆಗೆ ಶಾಲೆಯ ಜ್ಯೂನಿಯರ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಲಿದೆ. ನಂತರ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಸಿನಿಯರ್ ವಿದ್ಯಾರ್ಥಿಗಳಿಂದ ಗಾಯನ, 4 ರಿಂದ 5 ಗಂಟೆಯವರೆಗೆ ಸುಷ್ಮಾ ಹೆಗಡೆ ಇಸಳೂರು ತಂಡದಿಂದ, 5 ಗಂಟೆಯಿಂದ 6 ಗಂಟೆಯವರೆಗೆ ರೇಖಾ ಭಟ್ ಕೋಟೆಮನೆ ತಂಡದಿಂದ ಗಾಯನ ನಡೆಯಲಿದೆ.
ನಂತರ ಸಂಜೆ 6 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಉದ್ಘಾಟನೆ ಮಾಡಲಿದ್ದಾರೆ. ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕೆಡಿಸಿಸಿ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ, ಕಲಾಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಆಗಮಿಸಲಿದ್ದಾರೆ.
ಇದೇ ವೇಳೆ ಪಂ.ಗಣಪತಿ ಭಟ್ ಹಾಸಣಗಿ ಅವರಿಗೆ ಸನ್ಮಾನ ನಡೆಯಲಿದ್ದು, ವಸುಂಧರಾ ಹೆಗಡೆ ಹಾಗೂ ಪ್ರಣತಿ ಭಟ್ ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ನಂತರ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಸಂಜೆ 7 ಗಂಟೆಯಿಂದ ಪ.ಗಣಪತಿ ಭಟ್ ಹಾಸಣಗಿ ಅವರಿಂದ ಗಾಯನ, ಶ್ರೀಧರ ಮಾಂಡ್ರೆ ತಬಲಾ ಹಾಗೂ ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ವಾದನ ನಡೆಯಲಿದೆ. ಮಾನಸ ಹೆಗಡೆ ಹಾಗೂ ಶ್ರೀರಕ್ಷಾ ಬಾಗಿನಕಟ್ಟಾ ನಿರೂಪಣೆ ಮಾಡಲಿದ್ದು, ಸಂಗೀತಾಸಕ್ತರು ಭಾಗವಹಿಸಬೇಕು ಎಂದು ಸಂಘಟಕರು ಕೋರಿದ್ದಾರೆ.