ಯಲ್ಲಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಾಕ್ಪ್ರತಿಯೋಜಿತಾದ ಸ್ಪರ್ಧೆಗಳಲ್ಲಿ ಉಮ್ಮಚಗಿಯ ಶ್ರೀ ಶ್ರೀಮಾತಾ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು ಐದು ಪ್ರಥಮ ಪುರಸ್ಕಾರ, ಒಂದು ದ್ವಿತೀಯ ಮತ್ತು ಒಂದು ತೃತೀಯ ಪುರಸ್ಕಾರ ಪಡೆಯುವುದರೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.
ಜ್ಯೋತಿಷ್ಯ ಶಲಾಕಾ ಸ್ಪರ್ಧೆಯಲ್ಲಿ ಗಣೇಶಪ್ರಸಾದ ನಾಗರಾಜ ಭಟ್ಟ ಪ್ರಥಮ ಸ್ಥಾನ, ಅಲಂಕಾರ ಭಾಷಣ ಸ್ಪರ್ಧೆಯಲ್ಲಿ ನಾಗರಾಜ ನಾರಾಯಣ ಭಟ್ಟ ಪ್ರಥಮ ಸ್ಥಾನ, ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ಸುಮಂತ ಅನಂತ ಜೋಶಿ ಪ್ರಥಮ ಸ್ಥಾನ, ಕಾವ್ಯ ಕಂಠಪಾಠ ಸ್ಪರ್ಧೆಯಲ್ಲಿ ಶ್ರವಣಕುಮಾರ ಭಟ್ ಪ್ರಥಮ ಸ್ಥಾನ, ಜ್ಯೋತಿಷ್ಯ ಭಾಷಣದಲ್ಲಿ ವಿನಾಯಕ ರಾ. ಭಟ್ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಕ್ಷರ ಶ್ಲೋಕಿಯಲ್ಲಿ ಆದರ್ಶ ಗೋ. ಭಟ್ ದ್ವಿತೀಯ ಸ್ಥಾನ, ಭಾರತೀಯ ವಿಜ್ಞಾನ ಭಾಷಣದಲ್ಲಿ ನರೇಂದ್ರ ಶ್ರೀಪಾದ ಜೋಶಿ ತೃತೀಯ ಸ್ಥಾನ ಪಡೆದಿದ್ದು, ವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳಿಗೆ ಡಾ. ಕೆ.ಸಿ.ನಾಗೇಶ ಭಟ್ಟ ಮತ್ತು ಡಾ.ಮಂಜುನಾಥ ಭಟ್ಟ ಸುಣಜೋಗು ಮಾರ್ಗದರ್ಶನವನ್ನು ನೀಡಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವರ್ಗ ಅಭಿನಂದಿಸಿ ಆಶೀರ್ವದಿಸಿದೆ.