• first
  Slide
  Slide
  previous arrow
  next arrow
 • ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆಕಳ ಜೀವ ರಕ್ಷಿಸಿದ ಪತ್ರಕರ್ತ ರಾಜು ಕಾನಸೂರು

  300x250 AD

  ಶಿರಸಿ: ನಗರದ ಕಸ್ತೂರಬಾ ನಗರದ 18ನೇ ವಾರ್ಡನಲ್ಲಿ ಆಕಳೊಂದು ಬೆಳಗ್ಗಿನಿಂದ ಜೀವನ್ಮರಣದ ಮಧ್ಯೆ ಹೊರಳಾಡುತ್ತಿದ್ದ ವಿಷಯ ತಿಳಿದ ಪತ್ರಕರ್ತನೋರ್ವ ವೈದ್ಯರೊಂದಿಗೆ ಆಗಮಿಸಿ ಮೂಕ ಪ್ರಾಣಿಯ ಜೀವ ಉಳಿಸಿದ ಘಟನೆ ನಡೆದಿದೆ.

  ಬೆಳಗ್ಗಿನಿಂದ ಕಸ್ತೂರಾ ಬಾ ನಗರದ 18ನೇ ವಾರ್ಡಿನ ರಸ್ತೆ ಬದಿಯಲ್ಲಿ ತೀವ್ರ ಜ್ವರದಿಂದ ಒದ್ದಾಡುತ್ತಿದ್ದ ಆಕಳೊಂದನ್ನು ಕಂಡು ಸ್ಥಳೀಯರು ಸ್ಥಳೀಯ ಸಂಘ ಸಂಸ್ಥೆಗಳಿಗೆ ತಿಳಿಸಿದರೂ ಯಾರು ಸ್ಪಂದಿಸದೇ ಇದ್ದಾಗ ಸಂಜೆ ಸುಮಾರು 4 ಗಂಟೆಯ ವೇಳೆಗೆ ಕೇಂದ್ರ ಸರಕಾರದ ಆಪದ್ ಮಿತ್ರ ಸದಸ್ಯ ಹಾಗೂ ಪತ್ರಕರ್ತ ರಾಜು ಕಾನಸೂರು ಅವರಿಗೆ ಸ್ಥಳೀಯ ಚಂದ್ರು ಎನ್ನುವವರು ವಿಷಯ ತಿಳಿಸಿದಾಗ ಕೇವಲ 20 ನಿಮಿಷಗಳಲ್ಲಿ ವೈದ್ಯರೊಂದಿಗೆ ಆಗಮಿಸಿ ಮೂಕ ಪ್ರಾಣಿ ಆಕಳಿನ ಜೀವ ಉಳಿಸಿದ್ದಾರೆ. ರಾಜು ಕಾನಸೂರು ಇವರ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top