ಯಲ್ಲಾಪುರ: ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅವರ ಮೇಲಿನ ಹಲ್ಲೆ ನಡೆಸಿರುವ ಕೃತ್ಯವನ್ನು ತಾಲೂಕಾ ನೌಕರರ ಸಂಘದ ತಾಲೂಕಾ ಘಟಕ ಖಂಡಿಸಿ, ಸೋಮವಾರ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರಿಗೆ ಮನವಿ ಸಲ್ಲಿಸಿತು.
ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಜಗದೀಶ ಕಮ್ಮಾರ ಅವರು, ಉಮ್ಮಚಗಿ ಗ್ರಾ.ಪಂಗೆ ಕರ್ತವ್ಯ ಮುಗಿಸಿ, ಮರಳುತ್ತಿದ್ದಾಗ, ಕೆಲ ಪುಂಡರು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ನೌಕರರ ಮನೋಬಲ ಹೆಚ್ಚಿಸಿ, ನಿರ್ಭಿತಿಯಿಂದ ಕರ್ತವ್ಯ ನಡೆಸಲು ಅವಕಾಶ ಮಾಡಿಕೊಡಬೇಕು ಮತ್ತು ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕಾ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ರಾಜ್ಯ ಪರಿಷತ್ ಸದಸ್ಯ ಸಂಜೀವಕುಮಾರ ಹೊಸ್ಕೇರಿ, ಕಾರ್ಯದರ್ಶಿ ಶರಣಪ್ಪ ಗೊಜನೂರು, ಖಂಜಾಚಿ ಸುಭಾಸ ನಾಯಕ, ಪ್ರಮುಖರಾದ ಸುಬ್ರಮಣ್ಯ ಭಟ್ಟ, ಆರ್.ಆರ್.ಭಟ್ಟ, ಗಣಪತಿ ಭಾಗ್ವತ್, ಗಂಗಾಧರ ಭಟ್, ಶೀವಾ, ಜಿ.ಆರ್.ಗೀತಾ ಚವ್ಹಾಣ, ಸಂತೋಷ ನಾಯ್ಕ, ಸುಭಾಸ ಹೆಗಡೆ, ಸಣ್ಣಪ್ಪ ಭಾಗ್ವತ್, ನಾರಾಯಣ ಆರ್.ನಾಯಕ, ನಾರಾಯಣ ಕಾಂಬಳೆ ಮುಂತಾದವರು ಇದ್ದರು.