• Slide
  Slide
  Slide
  Slide
  previous arrow
  next arrow
 • ಜ.10 ಅಂಗಾರಕ ಸಂಕಷ್ಟಿ: ಗೋಳಿಯಲ್ಲಿ ‘ನಾದಪೂಜಾ’ ಕಾರ್ಯಕ್ರಮ

  300x250 AD

  ಶಿರಸಿ: ತಾಲೂಕಿನ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಹಾಗೂ ತಾರ ಷಡ್ಜ ಇವರ ಸಹಯೋಗದಲ್ಲಿ ಅಂಗಾರಕ ಸಂಕಷ್ಟಿ ಪ್ರಯುಕ್ತ ಜ.10, ಮಂಗಳವಾರ ಮಧ್ಯಾಹ್ನ 3.30ರಿಂದ ಗೋಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಾದಪೂಜೆ ಸಂಗೀತ ಕಾರ್ಯಕ್ರಮ, ಭರತನಾಟ್ಯ ಹಾಗು ಕಲಾಶ್ರೀ ಪುರಸ್ಕೃತ ಪಂ.ಎಂ.ಪಿ.ಹೆಗಡೆ ಪಡಿಗೇರಿ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  ಕು. ನವ್ಯಾ ಭಟ್ ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಗಾಯನ ಕಾರ್ಯಕ್ರಮವನ್ನು ಪಂ.ಎಂ.ಪಿ.ಹೆಗಡೆ ಪಡಿಗೇರಿ, ಶ್ರೀಮತಿ ಸುಪ್ರಿಯಾ ಹೆಗಡೆ ಹಿತ್ಲಳ್ಳಿ,ವಿನಾಯಕ ಹೆಗಡೆ ಮುತ್ಮುರ್ಡು ನಡೆಸಿಕೊಡಲಿದ್ದಾರೆ. ಬಾನ್ಸುರಿ ಹಾಗೂ ಸಾರಂಗಿ ಜುಗಲ್ಬಂದಿಯಲ್ಲಿ ನಾಗರಾಜ ಹೆಗಡೆ ಶಿರ್ನಾಲ, ಗುರುಪ್ರಸಾದ ಹೆಗಡೆ ಗಿಳಿಗುಂಡಿ ಮನರಂಜಿಸಲಿದ್ದಾರೆ.

  ಸಹಕಲಾವಿದರಾಗಿ ಸಂವಾದಿನಿಯಲ್ಲಿ ಅಜಯ್ ಹೆಗಡೆ ಬೆಣ್ಣೆಮನೆ, ತಬಲಾದಲ್ಲಿ ಭಾರವಿ ದೇರಾಜೆ ಸುರತ್ಕಲ್,ಶಂತನು ಶುಕ್ಲಾ ಮುಂಬೈ ಸಾಥ್ ನೀಡಲಿದ್ದಾರೆ.

  300x250 AD

  ಸರ್ವ ಕಲಾರಾಧಕರಿಗೂ,ಕಲಾಪೋಷಕರಿಗೂ ಪ್ರಕಟಣೆಯಲ್ಲಿ ಸ್ವಾಗತವನ್ನು ಕೋರಲಾಗಿದೆ.

  Share This
  300x250 AD
  300x250 AD
  300x250 AD
  Back to top