ದಾಂಡೇಲಿ: ಕೆ.ಎಲ್.ಇ.ಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ, ಕೆ.ಎಲ್.ಇ ನರ್ಸಿಂಗ್ ಕಾಲೇಜು ದಾಂಡೇಲಿ, ವೆಸ್ಟ್ ಕೋಸ್ಟ್ ಪೇಪರ್ ಮಿಲ್, ಲಯನ್ಸ್ ಕ್ಲಬ್, ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆ, ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಆಶ್ರಯದಲ್ಲಿ ನಗರದ ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಆರಂಭಗೊoಡ ಉಚಿತ ನರರೋಗ ಚಿಕಿತ್ಸಾ ಶಿಬಿರವು ಮಧ್ಯಾಹ್ನ 3 ಗಂಟೆಯವರೆಗೆ ನಡೆದು ಯಶಸ್ವಿಯಾಗಿ ಸಂಪನ್ನಗೊoಡಿತು.
ಶಿಬಿರವನ್ನು ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಉದ್ಘಾಟಿಸಿ ಮಾತನಾಡುತ್ತಾ ಕೆ.ಎಲ್.ಇ.ಎಸ್ ಪ್ರಭಾಕರ ಕೋರೆ ಆಸ್ಪತ್ರೆಯ ಆರೋಗ್ಯ ಸೇವೆಯನ್ನು ಕೊಂಡಾಡಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಕೆ.ಎಲ್.ಇ.ಎಸ್ ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರುಗಳಾದ ಡಾ.ಅಭಿಷೇಕ್ ಪಾಟೀಲ್ ಮತ್ತು ಡಾ. ವಿಕ್ರಂ ಟಿ.ಪಿಯವರು ಮಾತನಾಡಿ ಕೆ.ಎಲ್.ಇ.ಎಸ್ ಪ್ರಭಾಕರ ಕೋರೆ ಆಸ್ಪತ್ರೆಯ ಆರೋಗ್ಯ ಸೇವೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ನಗರ ಸಭೆಯ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ಶ್ರೀವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಡಳಿತಾಧಿಕಾರಿ ಪ್ರಕಾಶ್ ಪ್ರಭು, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್ ಪ್ರಸಾದ್, ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಖಿಲ್ ಕಿತ್ತೂರು, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ, ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಯೋಜನಾ ಸಂಯೋಜಕರಾದ ವಿನಾಯಕ ಚೌವ್ಹಾಣ್, ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ತಂಗಳ್, ಲಯನ್ಸ್ ಕ್ಲಬಿನ ಕರ‍್ಯದರ್ಶಿ ಮಾರುತಿ ರಾವ್ ಮಾನೆ, ಖಜಾಂಚಿ ಗಜಾನನ ಕರಂಗಾoವಕರ್, ಲಯನ್ಸ್ ಕ್ಲಬಿನ ಹಿರಿಯ ಸದಸ್ಯರಾದ ಯು.ಎಸ್.ಪಾಟೀಲ್, ವಿ.ಪಿ.ಜೋಶಿ, ಅನಿಲ್ ದಂಡಗಲ್, ಉದಯ ಶೆಟ್ಟಿ, ಪಿ.ಕೆ.ಜೋಶಿ, ಮುರಳೀಧರ್ ನಾಯ್ಕ, ಇಮ್ತಿಯಾಜ್ ಅತ್ತಾರ್, ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ವಿನಾಯಕ ಪಾಟೀಲ್ ಮತ್ತು ಕಾಲೇಜಿನ ಲೆಕ್ಕಾಧಿಕಾರಿ ಅಣ್ಣಪ್ಪ ಸುಂಕದ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಕೆ.ಎಲ್.ಇ.ಎಸ್ ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯರುಗಳು, ಸಿಬ್ಬಂದಿಗಳು ಬಾಗವಹಿಸಿದ್ದರು. ಶಿಬಿರದಲ್ಲಿ ಒಟ್ಟು 520 ಜನರು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದ ಯಶಸ್ಸಿಗೆ ನಗರದ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು, ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆಯ ಸಿಬ್ಬಂದಿಗಳು ಶ್ರಮಿಸಿದ್ದರು.