Slide
Slide
Slide
previous arrow
next arrow

ಉತ್ತಮ ಸಹ್ಯಾದ್ರಿ ಶಿಕ್ಷಕ ಪ್ರಶಸ್ತಿಗೆ ಕೆ.ಎಲ್.ಭಟ್ ಭಾಜನ

300x250 AD

ಶಿರಸಿ: ಇತ್ತೀಚೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ನಡೆದ ಅಂತರಾಷ್ಟ್ರೀಯ ಲೇಕ್ ಸಮ್ಮೇಳನದಲ್ಲಿ ನಗರದ ಸರಕಾರಿ ಪ್ರೌಢಶಾಲೆ ಗಣೇಶನಗರದ ವಿಜ್ಞಾನ ಶಿಕ್ಷಕ ಕೆ.ಎಲ್. ಭಟ್ಟರವರು ಕಾಲೇಜು ಮತ್ತು ಪ್ರೌಢಶಾಲೆ ಶಿಕ್ಷಕರ ವಿಭಾಗದಲ್ಲಿ ನಡೆದ ಸಂಶೋಧನಾ ಪ್ರಬಂಧ ಮಂಡನೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ‘ಉತ್ತಮ ಸಹ್ಯಾದ್ರಿ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇವರು “ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡುವ ಸಾಧನಗಳು” ಎಂಬ ವಿಷಯದಲ್ಲಿ ಸಂಶೋಧನೆ ಕೈಗೊಂಡಿದ್ದರು. ಅಲ್ಲದೇ ಇವರ ಮಾರ್ಗದರ್ಶನದಲ್ಲಿ ಇದೇ ಶಾಲೆಯ ವಿದ್ಯಾರ್ಥಿಗಳು ಪ್ರೌಢಶಾಲಾ ವಿಭಾಗದ ಪ್ರಬಂಧ ಮಂಡನೆಯಲ್ಲಿ “ಕಾಡುಸಸ್ಯಗಳಿಂದ ಆಹಾರವಾಗಿ ಆರೋಗ್ಯ ಸಂವರ್ಧನೆ” ಎಂಬ ವಿಷಯಕ್ಕೆ ಸಮಯ ಮಹಾಲೆ ಮತ್ತು ಸ್ಫೂರ್ತಿ ಆಚಾರಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ವಿಜ್ಞಾನಿಗಳಾದ ಡಾ.ಆನಂದಿ ಪಟೇಲ್ ಮತ್ತು ಡಾ.ಟಿ.ವಿ. ರಾಮಚಂದ್ರ ಪ್ರಶಸ್ತಿ ನೀಡಿದ್ದಾರೆ. ರವಿ ನಾಯ್ಕ ಮತ್ತು ಅನಿಲ ನಾಯ್ಕ ತಾಂತ್ರಿಕ ನೆರವು ನೀಡಿದ್ದರು. ಈ ಸಾಧನೆ ಗೈದವರನ್ನು ಶಿರಸಿಯ ಕ್ಷೇತ್ರಶಿಕ್ಷಣಾಧಿಕಾರಿಗಳು ಎಂ.ಎಸ್.ಹೆಗಡೆ, ಎಸ್.ಡಿ.ಎಂ.ಸಿ.ಅಧ್ಯಕ್ಷರು ಪ್ರಕಾಶ ಆಚಾರಿ, ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಮತ್ತು ಶಿಕ್ಷಕವೃಂದದವರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top